ಕಟುಕರಿಗೆ ಕಣ್ಣೀರು ಬರಲ್ಲ, ಕೇವಲ ಮಾತೃಹೃದಯ ಇರುವವರಿಗೆ ಮಾತ್ರ  ಬರುತ್ತದೆ: ಕುಮಾರಸ್ವಾಮಿ

ಕಟುಕರಿಗೆ ಕಣ್ಣೀರು ಬರಲ್ಲ, ಕೇವಲ ಮಾತೃಹೃದಯ ಇರುವವರಿಗೆ ಮಾತ್ರ ಬರುತ್ತದೆ: ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Nov 02, 2024 | 11:09 AM

ರಾಜಕಾರಣದಲ್ಲಿ ಕೆಲವರು ಕಟುಕರಿದ್ದಾರೆ, ಅವರಿಗೆ ಯಾವತ್ತೂ ಕಣ್ಣೀರು ಬರಲ್ಲ, ಕೇವಲ ಮಾತೃಹೃದಯ ಇರುವವರಿಗೆ ಮಾತ್ರ ಕಣ್ಣಲ್ಲಿ ನೀರು ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಅದು ಸರಿ, ಆದರೆ ನಿಖಿಲ್ ಕುಮಾರಸ್ವಾಮಿ ಅತ್ತಿದ್ದು ಯಾಕೆ ಅಂತ ಅವರು ಹೇಳಲಿಲ್ಲ.

ಮೈಸೂರು: ನಿಖಿಲ್ ಕುಮರಸ್ವಾಮಿ ನಿನ್ನೆ ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವಾಗ ಕಣ್ಣಲ್ಲಿ ನೀರು ಹಾಕಿದ್ದನ್ನು ಕಾಂಗ್ರೆಸ್ ನಾಯಕರು ಲೇವಡಿ ಮಾಡುತ್ತಿದ್ದಂತೆಯೇ ಹೆಚ್ ಡಿ ಕುಮಾರಸ್ವಾಮಿ ಅದಕ್ಕೆ ಸ್ಪಷ್ಟನೆ ನೀಡುವ ಪ್ರಯತ್ನ ಮಾಡಿದ್ದಾರೆ. ತಾನು ಸಾರ್ವಜನಿಕವಾಗಿ ಹಲವಾರು ಬಾರಿ ಕಣ್ಣೀರು ಹಾಕಿದ್ದೇನೆ, ಜನರ ಸಮಸ್ಯೆಗಳನ್ನು ಕಂಡು ನೋವಿನಿಂದ ಕಣ್ಣಲ್ಲಿ ನೀರು ಬರುತ್ತದೆ ಎಂದು ಕೇಂದ್ರ ಸಚಿವ ಹೇಳಿದರು. ಚುನಾವಣಾ ಪ್ರಚಾರದಲ್ಲಿ ಮತ್ತು ಅನುಕಂಪ ಗಿಟ್ಟಿಸಲು ತಾನ್ಯಾವತ್ತೂ ಕಣ್ಣೀರು ಹಾಕಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ಚನ್ನಪಟ್ಟಣದಲ್ಲಿ ಪ್ರಚಾರ ಮಾಡುವಾಗ ಭಾವುಕರಾಗಿ ಕಣ್ಣೀರು ಹಾಕಿದ ನಿಖಿಲ್ ಕುಮಾರಸ್ವಾಮಿ