ಬೇರೆ ಜಿಲ್ಲೆಯ ಕುಮಾರಸ್ವಾಮಿ ಕುಟುಂಬ ಸ್ಥಳೀಯನಾದ ನನ್ನ ಮೇಲೆ ದಬ್ಬಾಳಿಕೆ ನಡೆಸುತ್ತಿದೆ: ಯೋಗೇಶ್ವರ್
ಮಂಕುಂದ, ತಲಕಾಡು ಸೇರಿದಂತೆ ಹಳೆ ಮೈಸೂರು ಪ್ರಾಂತ್ಯದಲ್ಲಿ ಗಂಗರು ಆಳ್ವಿಕೆ ನಡೆಸಿದ್ದಾರೆ ಹಾಗಾಗಿ ಇಲ್ಲಿನ ಜನರಲ್ಲಿ ನಾಯಕತ್ವದ ಗುಣ ಸ್ವಾಭಾವಿಕವಾಗಿ ಬಂದಿದೆ, ಜನರಿಗೆ ಇತಿಹಾಸವನ್ನು ಗೊತ್ತು ಮಾಡಲು ಈ ಭಾಗದಲ್ಲೊಂದು ಸಂಶೋಧನಾ ಕೇಂದ್ರ ಸ್ಥಾಪಿಸಬೇಕೆಂದು ಬೊಮ್ಮಾಯಿಗೆ ಹೇಳಿದ್ದೆ, ಆಗ ಸಾಧ್ಯವಾಗಿರಲಿಲ್ಲ, ಈಗಿನ ಸರ್ಕಾರಕ್ಕೆ ಹೇಳಿ ಮಾಡಿಸುವುದಾಗಿ ಯೋಗೇಶ್ವರ್ ಹೇಳಿದರು.
ರಾಮನಗರ: ತಾನು ಸ್ಥಳೀಯನಾದರೂ ಬೇರೆ ಜಿಲ್ಲೆಯಿಂದ ಬಂದಿರುವ ಹೆಚ್ ಡಿ ಕುಮಾರಸ್ವಾಮಿ ಕುಟುಂಬ ತನ್ನ ಮೇಲೆ ದಬ್ಬಾಳಿಕೆ ನಡೆಸುತ್ತಿದೆ, ಮೊದಲು ಕುಮಾರಸ್ವಾಮಿ ಎರಡು ಬಾರಿ ತನ್ನ ವಿರುದ್ಧ ಸ್ಪರ್ಧಿಸಿದರು, ನಂತರ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಈಗ ಅವರ ಮಗ ನಿಖಿಲ್ ಕುಮಾರಸ್ವಾಮಿ, ಈ ಕುಟುಂಬ ಯಾಕೆ ತನ್ನನ್ನು ಅಷ್ಟೊಂದು ವಿರೋಧಿಸುತ್ತದೆ ಅಂತ ಅರ್ಥವಾಗುತ್ತಿಲ್ಲ, ಅದರೆ ತಾನು ಮಾಡಿರುವ ಹೋರಾಟಗಳೆಲ್ಲ ಜನಕ್ಕೆ ಗೊತ್ತು ಎಂದು ಚನ್ನಪಟ್ಟಣ ಕ್ಷೇತ್ರದ ಮಂಕುಂದ ಗ್ರಾಮದಲ್ಲಿ ಚುನಾವಣಾ ಪ್ರಚಾರ ಮಾಡಿದ ಸಿಪಿ ಯೋಗೇಶ್ವರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮತದಾರರ ಜೊತೆ ರಾಜನಂತೆ ವರ್ತಿಸಿರುವ ಕುಮಾರಸ್ವಾಮಿ ವಿಶ್ವಾಸ ಕಳೆದುಕೊಂಡಿದ್ದಾರೆ: ಯೋಗೇಶ್ವರ್