ಖರ್ಗೆ ಹೇಳಿದ್ದನ್ನು ವಿಶ್ಲೇಷಿಸಿದರೆ ಅದು ರಾಜಕೀಯ ಪುಢಾರಿತನ ಅಲ್ಲ: ಪ್ರಲ್ಹಾದ್ ಜೋಶಿ
ಅವಾಸ್ತವಿಕ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಏನೆಲ್ಲ ಸಮಸ್ಯೆಯುಂಟಾಗುತ್ತದೆ ಅನ್ನೋದಿಕ್ಕೆ ಜ್ವಲಂತ ಉದಾಹರಣೆಯಾಗಿ ಹಿಮಾಚಲ ಪ್ರದೇಶ ಎಲ್ಲರ ಕಣ್ಣಮುಂದಿದೆ, ಸರ್ಕಾರಿ ನೌಕರರಿಗೆ ಸಂಬಳ ಮತ್ತು ನಿವೃತ್ತರಾದವರಿಗೆ ಪಿಂಚಣಿ ನೀಡುವುದು ಸಹ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ, ತಮ್ಮ ಶಾಸಕರು ಹೇಳುತ್ತಿರುವುದನ್ನು ಸಿದ್ದರಾಮಯ್ಯ ಅರ್ಥಮಾಡಿಕೊಳ್ಳುವರೇ ಎಂದು ಜೋಶಿ ಕೇಳಿದರು.
ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ರಾಜಕೀಯ ಪುಢಾರಿ ಅಂತ ಕರೆದಿದ್ದನ್ನು ವ್ಯಾಪಕವಾಗಿ ಖಂಡಿಸಲಾಗುತ್ತಿದೆ. ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತಾಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದನ್ನು ಪ್ರಧಾನಿ ಮೋದಿ ವಿಶ್ಲೇಷಣೆ ಮಾಡಿದ್ದಾರೆ, ಅದಕ್ಕೆ ಸೌಜನ್ಯಯುತವಾಗಿ ಪ್ರತಿಕ್ರಿಯೆ ಅಥವಾ ಸಮರ್ಥನೆ ಮಾಡಿಕೊಳ್ಳುವ ಬದಲು ಸಿದ್ದರಾಮಯ್ಯ ಪ್ರಧಾನಿಯವರನ್ನು ರಾಜಕೀಯ ಪುಢಾರಿ ಅಂತ ಕರೆದಿದ್ದಾರೆ, ಸಿದ್ದರಾಮಯ್ಯ ತಮ್ಮ ನಾಲಗೆಯನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಆಗಿದೆ ಎಂಬುದು ಕಾಂಗ್ರೆಸ್ಗೆ ಈಗ ಗೊತ್ತಾಗಿದೆ; ಪ್ರಲ್ಹಾದ್ ಜೋಶಿ ಲೇವಡಿ