ಒಲಾ ಸಂಸ್ಥೆಯ ಇಲೆಕ್ಟ್ರಿಕ್ ವಾಹನಗಳನ್ನು ದೆಹಲಿಯಲ್ಲಿ ಖರೀದಿಸಿದರೆ ಸಬ್ಸಿಡಿ ಸಿಗುತ್ತದೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Aug 16, 2021 | 5:19 PM

10 ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿರುವ ಓಲಾ ಇವಿಗಳು ಕೇವಲ 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಆಗುತ್ತವೆ ಮತ್ತು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 181 ಕಿಮೀಗಳವರೆಗೆ ಅವುಗಳನ್ನು ಓಡಿಸಬಹುದು.

ಆಗಸ್ಟ್ ಮೊದಲ ವಾರದಲ್ಲಿ ಪ್ರಾಮಿಸ್ ಮಾಡಿದ ಹಾಗೆ ಓಲಾ ಸಂಸ್ಥೆಯು ಸ್ವಾತಂತ್ರ್ಯೋತ್ಸವ ದಿನದಂದು ತನ್ನ ಎರಡು ಬಗೆಯ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಲಾಂಚ್ ಮಾಡಿದೆ. ನಾವು ಈ ಬಗ್ಗೆ ವರದಿ ಮಾಡಿದ್ದು ಪ್ರಾಯಶಃ ವೀಕ್ಷಕರಿಗೆ ನೆನೆಪಿರಬಹುದು. ಆದರೆ ಸಂಸ್ಥೆಯ ಮಾಲೀಕರು ಅದರ ಬೆಲೆಯನ್ನು ಬಹಿರಂಗ ಪಡಿಸಿರಲಿಲ್ಲ. ಕೇವಲ ರೂ. 499 ಗಳನ್ನು ಗ್ರಾಹಕರಿಂದ ಕಟ್ಟಿಸಿಕೊಂಡು ಅದು ಮುಂಗಡ ಬುಕಿಂಗ್ ಆರಂಭಿಸಿತ್ತು. ಸ್ಕೂಟರ್​ಗಳನ್ನು ಲಾಂಚ್ ಮಾಡಿಯಾದ ಮೇಲೆ ಬೆಲೆ ಬಹಿರಂಗಪಡಿಸಲಾಗುವುದೆಂದು ಹೇಳಿದ್ದ ಓಲಾ ಕಂಪನಿಯು ತನ್ನ ಮಾತಿನಂತೆ ನಡೆದುಕೊಂಡಿದೆ.

ಎಲೆಕ್ಟ್ರಿಕ್ ವಾಹನಗಳು ಬಜೆಟ್ನಲ್ಲಿ ಸಿಗುತ್ತವೆ ಅಂತ ಯಾವತ್ತೂ ಭಾವಿಸಬೇಡಿ, ಅದು ನಮ್ಮ ಭ್ರಮೆ ಮಾರಾಯ್ರೇ. ಎರಡು ನಮೂನೆ ಎಸ್ 31 ಮತ್ತು ಎಸ್ 1 ಪ್ರೊ ಈ ಸ್ಕೂಟರ್​​ಗಳ ಬೆಲೆಯನ್ನು ಓಲಾ ನಿಗದಿಪಡಿಸಿದೆ. ಮೊದಲ ಮಾಡೆಲ್ ಬೆಲೆ ಪೂರ್ತಿ ಒಂದು ಲಕ್ಷ ರೂಪಾಯಿಯೇನೂ  ಅಲ್ಲ. ನೀವು ಒಂದು ಲಕ್ಷ ನೀಡಿದರೆ ಒಂದು ರೂಪಾಯಿ ವಾಪಸ್ಸು ಸಿಗುತ್ತದೆ. ಹಾಗೆಯೇ, ಎಸ್ 1 ಪ್ರೋ ಈ ಸ್ಕೂಟರ್ ಬೆಲೆ ರೂ. 1,29,999. ಆದರೆ ನೀವು ಈ ಸ್ಕೂಟರ್ಗಳನ್ನು ದೆಹಲಿಯಲ್ಲಿ ಖರೀದಿಸಿದರೆ ಮೊದಲ ಮಾಡೆಲ್ ಮೇಲೆ ಸುಮಾರು ರೂ. 15,000 ಮತ್ತು ಎರಡನೆಯದರ ಮೇಲೆ ರೂ. 20,000 ಸಬ್ಸಿಡಿ ಸಿಗಲಿದೆ.

10 ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿರುವ ಓಲಾ ಇವಿಗಳು ಕೇವಲ 18 ನಿಮಿಷಗಳಲ್ಲಿ ಶೇಕಡಾ 50 ರಷ್ಟು ಚಾರ್ಜ್ ಆಗುತ್ತವೆ ಮತ್ತು ಒಮ್ಮೆ ಪೂರ್ತಿಯಾಗಿ ಚಾರ್ಜ್ ಮಾಡಿದರೆ 181 ಕಿಮೀಗಳವರೆಗೆ ಅವುಗಳನ್ನು ಓಡಿಸಬಹುದು. ಹಾಗೆಯೇ ಕಂಪನಿಯ ಮೂಲಗಳ ಪ್ರಕಾರ ಸ್ಕೂಟರ್ಗಳು ಕೇವಲ 3 ಸೆಕೆಂಡುಗಳಲ್ಲಿ 40 ಕಿಮೀ/ಗಂಟೆಗೆ ವೇಗವನ್ನು ಪಡೆದುಕೊಳ್ಳುತ್ತವೆ.

ಇದನ್ನೂ ಓದಿ: Viral Video: 22 ಅಡಿ ಉದ್ದದ ಹಾವನ್ನು ಹೆಗಲ ಮೇಲೆ ಹಾಕಿಕೊಂಡು ಹೋದ ವ್ಯಕ್ತಿ; ಮೈ ಜುಂ ಎನಿಸುವ ವಿಡಿಯೋ ಇಲ್ಲಿದೆ