ಆಕಾಶದಲ್ಲಿ ತಿರಂಗ ಹಾರುವುದನ್ನು ನೋಡುತ್ತಾ ಜನಗನಮನ ಹಾಡುತ್ತಿದ್ದರೆ ಮೈಮನಗಳಲ್ಲಿ ರೋಮಾಂಚನ!
15 ನೇ ಆಗಸ್ಟ್ ರಂದು ಬೇರೆ ಬೇರೆ ದೇಶಗಳಲ್ಲಿರುವ ಭಾರತದ ರಾಯಭಾರಿಗಳು ತಮ್ಮ ತಮ್ಮ ಕಚೇರಿಗಳ ಮುಂದೆ ತಿರಂಗವನ್ನು ಹಾರಿಸಿದರು. ರಾಯಭಾರಿಗಳ ಜೊತೆ ಇತರ ಸಿಬ್ಬಂದಿ ವರ್ಗದವರೂ ಸಹ ನಮ್ಮಷ್ಟೇ ಸಂಭ್ರಮ ಮತ್ತು ಉತ್ಕಟ ದೇಶಾಭಿಮಾನದೊಂದಿಗೆ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನದಂದು ದೇಶದ ಪ್ರತಿ ಮೂಲೆಮೂಲೆಯಲ್ಲಿ ತಿರಂಗ ರಾರಾಜಿಸುತಿತ್ತು. ಅದು ಎತ್ತರದಲ್ಲಿ ಹಾರುವುದನ್ನು ನೋಡುವುದೇ ಒಂದು ವಿಶಿಷ್ಟ ಅನುಭೂತಿ ಮತ್ತು ರೋಮಾಂಚನ. ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ನಂತರ ನಾವು ಈ ಪರಿ ಸಂತೋಷಪಡುತ್ತಿರಬೇಕಾದರೆ, ದೇಶದಲ್ಲಿ ಮೊದಲ ಬಾರಿಗೆ ಬ್ರಿಟಿಷರ ಯೂನಿಯನ್ ಜಾಕ್ ಕೆಳಗಿಳಿದು ಅದರ ಸ್ಥಾನದಲ್ಲಿ ತ್ರಿವರ್ಣ ಧ್ವಜ ಹಾರಿದಾಗ ನಮ್ಮ ಹಿರಿಯರು ಎಂಥ ಸಂಭ್ರಮ ಆಚರಿಸಬಹುದು ಅಂತ ನೆನಪಿಸಿಕೊಳ್ಳಿ. ಅದನ್ನು ನೆನಪಿಸಿಕೊಳ್ಳುವುದು ಸಹ ಒಂದು ರೋಮಾಂಚನವೇ.
15 ನೇ ಆಗಸ್ಟ್ ರಂದು ಬೇರೆ ಬೇರೆ ದೇಶಗಳಲ್ಲಿರುವ ಭಾರತದ ರಾಯಭಾರಿಗಳು ತಮ್ಮ ತಮ್ಮ ಕಚೇರಿಗಳ ಮುಂದೆ ತಿರಂಗವನ್ನು ಹಾರಿಸಿದರು. ರಾಯಭಾರಿಗಳ ಜೊತೆ ಇತರ ಸಿಬ್ಬಂದಿ ವರ್ಗದವರೂ ಸಹ ನಮ್ಮಷ್ಟೇ ಸಂಭ್ರಮ ಮತ್ತು ಉತ್ಕಟ ದೇಶಾಭಿಮಾನದೊಂದಿಗೆ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ. ನಮಗೆ ಹಂಗರಿ ದೇಶದ ರಾಜಧಾನಿ ಬುಡಾಪೆಸ್ಟ್ನಲ್ಲಿ ಭಾರತದ ಹೈ ಕಮೀಶನರ್ ಕುಮಾರ್ ತುಹಿನ್ ಅವರು ತಿರಂಗ ಹಾರಿಸಿದ ವಿಡಿಯೋ ಸಿಕ್ಕಿದೆ. ಧ್ವಜವನ್ನು ಸ್ವಚ್ಛ ನೀಲಿಯಾಕಾಶದಲ್ಲಿ ಹಾರಿಸಿದ ನಂತರ ತುಹಿನ್, ಅವರ ಕಚೇರಿಯ ಸಿಬ್ಬಂದಿ ಮತ್ತು ಬುಡಾಪೆಸ್ಟ್ನಲ್ಲಿರುವ ಭಾರತೀಯರು ರಾಷ್ಟ್ರಗೀತೆಯನ್ನು ಹಾಡಿದ್ದನ್ನು ಕೂತ ಸ್ಥಳದಿಂದು ಎದ್ದುನಿಂತು ಕೇಳುತ್ತಿದ್ದರೆ ಮೈ ನವಿರೇಳುತ್ತದೆ.
ಡಯಾನಾ ಪೆಂಟಿ ನಿಮಗೆ ನೆನಪಿದ್ದಾರಾ? 2012 ರಲ್ಲಿ ಬಿಡುಗಡೆಯಾದ ‘ಕಾಕ್ಟೇಲ್’ ಹೆಸರಿನ ಬಾಲಿವುಡ್ ಚಿತ್ರದಲ್ಲಿ ಅವರು ಸೈಫ್ ಅಲಿಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆ ಪ್ರಮುಖ ಪಾತ್ರವೊಂದರಲ್ಲಿ ನಟಿಸುವ ಮೂಲಕ ಹಿಂದಿ ಚಿತ್ರರಂಗಕ್ಕೆ ಪ್ರವೇಶ ಮಾಡಿ ಆಮೇಲೆ 3-4 ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಈಗ ಡಯಾನಾ ಕೇವಲ ಸಾಮಾಜಿಕ ಜಾಲತಾಣಗಲ್ಲಿ ಮಾತ್ರ ಬ್ಯೂಸಿಯಾಗಿರುವಂತಿದೆ.
ಅವರು ಈಗ ನೆನಪಾಗಿದ್ದರ ಹಿಂದೆ ಕಾರಣವಿದೆ. ಸದ್ಯಕ್ಕೆ ಡಯಾನಾ ಅವರು ಇದೇ ಬುಡಾಪೆಸ್ಟ್ನಲ್ಲಿದ್ದಾರೆ. ನಿನ್ನೆ (ರವಿವಾರ) ಅವರು ಸಹ ತಿರಂಗ ಕೈಯಲ್ಲಿ ಹಿಡಿದು ಸಂಭ್ರಮಿಸಿದ್ದಾರೆ ಮತ್ತು ಅದನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇಲ್ಲಿದೆ ನೋಡಿ ಅವರ ವಿಡಿಯೋ.
View this post on Instagram
ಇದನ್ನೂ ಓದಿ: ಸೀರೆಯುಟ್ಟೂ ಬ್ಯಾಕ್ಫ್ಲಿಪ್ ಮಾಡಬಹುದು ಅಂತ ಮಿಶಾ ಶರ್ಮ ಸಾಬೀತು ಮಾಡಿದ್ದಾರೆ, ಅವರ ವಿಡಿಯೋ ವೈರಲ್