Loading video

ಜಲಮಂಡಳಿ ನೀರಿನ ದರ ಹೆಚ್ಚಿಸುವುದನ್ನು ಡಿಕೆ ಶಿವಕುಮಾರ್ ನೇರವಾಗಿ ಹೇಳದೆ ಸುತ್ತುಬಳಸಿ ಹೇಳಿದರು!

|

Updated on: Jan 28, 2025 | 5:29 PM

ನೀರಿನ ದರ ಎಷ್ಟು ಹೆಚ್ಚಿಸಬೇಕೆನ್ನುವುದನ್ನು ಇನ್ನೂ ನಿರ್ಧರಿಸಿಲ್ಲ, ಒಂದು ಪ್ರಸ್ತಾವನೆಯನ್ನು ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ, ಆದರೆ ಹೆಚ್ಚಿಸುವ ಅನಿವಾರ್ಯತೆಯಂತೂ ಇದೆ, ಅಧಿಕಾರಿಗಳು 2-3 ಪ್ರಸ್ತಾವನೆಗಳನ್ನು ನೀಡುತ್ತಾರೆ, ಅವುಗಳಲ್ಲಿ ಸೂಕ್ತವಾಗಿರುವುದನ್ನು ಆಯ್ಕೆ ಮಾಡಿ ಜಲಮಂಡಳಿ ಒದಗಿಸುವ ನೀರಿನ ದರ ಹೆಚ್ಚಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

ಬೆಂಗಳೂರು: ನೀರಿನ ದರ ಹೆಚ್ಚಿಸುವ ಬಗ್ಗೆ ಮಾತು ಬಹಳ ದಿನಗಳಿಂದ ಕೇಳಿಬರುತ್ತಲೇ ಇತ್ತು, ಅದನ್ನು ಇವತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಖಚಿತಪಡಿಸಿದ್ದಾರೆ. ಜಲಮಂಡಳಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಶಿವಕುಮಾರ್ ಜಲಮಂಡಳಿ ನಗರವಾಸಿಗಳಿಗೆ ಒದಗಿಸುವ ನೀರಿನ ಅಕ್ರಮ ಮತ್ತು ದುರ್ಬಳಕೆ ಹೆಚ್ಚುತ್ತಿದೆ, ಬಿಡಬ್ಲ್ಯೂಎಸ್​ಎಸ್​ಬಿಯನ್ನು ನಡೆಸಲು ತಿಂಗಳಿಗೆ ₹85 ಕೋಟಿ ಖರ್ಚಾಗುತ್ತಿದೆ, ಬ್ಯಾಂಕ್ ಗಳಿಗೆ ಸಾಲಕ್ಕಾಗಿ ಅರ್ಜಿ ಹಾಕಿದರೆ ಅವರು ಜಲಮಂಡಳಿ ನಿರ್ವಹಣೆ ಸರಿಯಾಗಿ ಅಗುತ್ತಿಲ್ಲ ಎಂದು ವಾಪಸ್ಸು ಕಳಿಸುತ್ತಾರೆ ಎಂದರು. ಬಿಡಬ್ಲ್ಯೂಎಸ್​ಎಸ್​ಬಿ ನೀರಿನ ಎಲ್ಲ ಬಳಕೆದಾರರ ಹೆಸರುಗಳು ದಾಖಲಾತಿ ಪುಸ್ತಕಗಳಿಗೆ ಬರಬೇಕು, ನೀರಿನ ದರ ಎಷ್ಟು ಹೆಚ್ಚಿಸಲಾಗುತ್ತದೆ ಅನ್ನೋದು ಬೇರೆ ವಿಷಯ, ಬಡವರು ಲೀಟರ್ ಗೆ ಒಂದು ಪೈಸೆಯನ್ನಾದರೂ ಕೊಡುವಂತಾಗಬೇಕು ಎಂದು ಸಚಿವ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ನೀರಿನ ದರ ಹೆಚ್ಚಳ ಸುಳಿವು ನೀಡಿದ ಬೆಂಗಳೂರು ಜಲಮಂಡಳಿ: ಡಿಕೆಶಿ ನೇತೃತ್ವದ ಮುಂದಿನ ಸಭೆಯಲ್ಲಿ ತೀರ್ಮಾನ ಸಾಧ್ಯತೆ