ಬಿಕ್ಲು ಶಿವ ಕೊಲೆ ಕೇಸ್​​ನಲ್ಲಿ BJP ಶಾಸಕ  ಭೈರತಿ ಬಸವರಾಜ್​​ಗೆ ಮತ್ತಷ್ಟು ಸಂಕಷ್ಟ?

Edited By:

Updated on: Dec 24, 2025 | 7:12 PM

ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಭೈರತಿ ಬಸವರಾಜ್‌ಗೆ ಸಂಕಷ್ಟ ಎದುರಾಗಿದೆ. ಹೈಕೋರ್ಟ್ ಕೋಕಾ ಕಾಯ್ದೆಯನ್ನು ತಿರಸ್ಕರಿಸಿದರೂ ಗೃಹ ಇಲಾಖೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಸಿದ್ಧವಾಗಿದೆ. ಸುಪ್ರೀಂ ಕೋರ್ಟ್ ಕೋಕಾ ಕಾಯ್ದೆಯನ್ನು ಅನ್ವಯಿಸಿದರೆ ಭೈರತಿ ಬಸವರಾಜ್‌ಗೆ ಜಾಮೀನುರಹಿತ ಕಠಿಣ ಶಿಕ್ಷೆ ಎದುರಾಗಲಿದೆ.

ಬೆಂಗಳೂರು, ಡಿಸೆಂಬರ್​​ 24: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧ ಭೈರತಿ ಬಸವರಾಜ್​ ಸೇರಿ ಉಳಿದ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕೋಕಾ ಕಾಯ್ದೆಯನ್ನು ತಿರಸ್ಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​​ ಮೊರೆ ಹೋಗಲು ಅನುಮತಿ ಕೇಳಿ ಸಿಐಡಿ ಮಾಡಿದ್ದ ಮನವಿಗೆ ಗೃಹ ಇಲಾಖೆ ಹಸಿರು ನಿಶಾನೆ ತೋರಿದೆ. ಒಂದು ವೇಳೆ ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ಕೋಕಾ ಕಾಯ್ದೆ ಅನ್ವಯಿಸುತ್ತದೆ ಎಂದು ತೀರ್ಪು ನೀಡಿದರೆ, ಭೈರತಿ ಬಸವರಾಜ್ ಸೇರಿದಂತೆ ಇತರ ಆರೋಪಿಗಳಿಗೆ ಮತ್ತಷ್ಟು ಸಂಕಷ್ಟ ಕಟ್ಟಿಟ್ಟ ಬುತ್ತಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Dec 24, 2025 07:12 PM