ತುಂಬುತೋಳಿನ ಶರ್ಟ್ ಧರಿಸಿ ಪಿಎಸ್ ಐ ಪರೀಕ್ಷೆಗಳ ಬಂದ ಅಭ್ಯರ್ಥಿಗಳ ಅವಸ್ಥೆ ಏನಾಯ್ತು ಗೊತ್ತಾ? ವಿಡಿಯೋ ನೋಡಿ!
ಹಾಗೆಯೇ, ಮಹಿಳಾ ಕ್ಯಾಂಡಿಡೇಟ್ ಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ದುಬಾರಿ ಆಭರಣಗಳನ್ನು ಧರಿಸಿದ್ದ ಕೆಲವರು ಆಕ್ಷೇಪಣೆ ಸಲ್ಲಿಸಿದರಾದರೂ ಪ್ರಾಧಿಕಾರ ಅಧಿಕಾರಿಗಳ ಮಾತನ್ನು ಅಂಗೀಕರಿಸಲೇಬೇಕಾಯ್ತು, ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ.
ಬೆಂಗಳೂರು: ಇದರಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ್ದೇನೂ (Karnataka Examination Authority) ತಪ್ಪಿಲ್ಲ ಅನಿಸುತ್ತೆ. ಪರೀಕ್ಷಾರ್ಥಿಗಳಿಗೆ (candidates) ನೀಡಿದ ಸೂಚನೆಗಳಲ್ಲಿ (instructions) ಪೂರ್ತಿತೋಳಿನ ಶರ್ಟ್ ಧರಿಸಿ ಬರಕೂಡದು ಮತ್ತು ಮಹಿಳಾ ಅಭ್ಯರ್ಥಿಗಳು ಯಾವುದೇ ಬಗೆಯ ಅಭರಣ ಧರಿಸಿ ಬರಬಾರದು ಅಂತ ಸ್ಪಷ್ಟವಾಗಿ ಹೇಳಲಾಗಿದೆ. ಆದರೂ, ಇಂದು ಬೆಂಗಳೂರಲ್ಲಿ ನಡೆದ 545 ಪಿಎಸ್ ಐ ನೇಮಕಾತಿ ಮರುಪರೀಕ್ಷೆಯಲ್ಲಿ ಕೆಲವರು ಉದ್ದತೋಳಿನ ಶರ್ಟ್ ಮತ್ತು ಮಹಿಳೆಯರು ಆಭರಣಗಳನ್ನು ಧರಿಸಿ ಬಂದಿದ್ದರು. ಪ್ರಾಧಿಕಾರದ ಸಿಬ್ಬಂದಿ ಫುಲ್ ಸ್ಲೀವ್ಸ್ ಧರಿಸಿ ಬಂದಿದ್ದ ಅಭ್ಯರ್ಥಿಗಳ ಶರ್ಟ್ ತೋಳುಗಳನ್ನು ಕತ್ತರಿಸಿ ಅರ್ಧತೋಳು ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ನೌಕರಿಗಾಗಿ ಹಂಬಲಿಸುತ್ತಿರುವ ಯುವಕರು ಅನಿವಾರ್ಯವಾಗಿ ತಮ್ಮ ಅಂಗಿಗಳ ತೋಳಿನ ಬಲಿದಾನಕ್ಕೆ ಒಪ್ಪಲೇಬೇಕಾಯಿತು. ಹಾಗೆಯೇ, ಮಹಿಳಾ ಕ್ಯಾಂಡಿಡೇಟ್ ಗಳು ಆಭರಣಗಳನ್ನು ತೆಗೆದಿಟ್ಟು ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಿದರು. ದುಬಾರಿ ಆಭರಣಗಳನ್ನು ಧರಿಸಿದ್ದ ಕೆಲವರು ಆಕ್ಷೇಪಣೆ ಸಲ್ಲಿಸಿದರಾದರೂ ಪ್ರಾಧಿಕಾರ ಅಧಿಕಾರಿಗಳ ಮಾತನ್ನು ಅಂಗೀಕರಿಸಲೇಬೇಕಾಯ್ತು, ಕೆಲ ಮಹಿಳೆಯರು ಪರೀಕ್ಷೆ ಬರೆಯದೆ ವಾಪಸ್ಸು ಹೋದರೆಂಬ ಮಾಹಿತಿಯೂ ಇದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

