ಮೈಸೂರು: ಹುರುಳಿಕಾಳಿನಿಂದ ಸುಟ್ಟು ಕರಕಲಾದ ಕಾರು, ವಿಡಿಯೋ ನೋಡಿ!
ಹುರುಳಿಕಾಳಿನಿಂದ ಕಾರು ಸುಟ್ಟು ಕರಕಲಾದ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಹೊಸಕೋಟೆ ರಸ್ತೆಯಲ್ಲಿ ನಡೆದಿದೆ. ಏಕಾಏಕಿ ಬೆಂಕಿ ಹೇಗೆ ಧಗಧಗಿಸಿದೆ ಎನ್ನುವುದನ್ನು ವಿಡಿಯೋನಲ್ಲಿ ನೋಡಿ.
ಮೈಸೂರು, (ಜನವರಿ 12): ಹುರುಳಿಕಾಳಿನಿಂದ ಕಾರು ಸುಟ್ಟು ಕರಕಲಾದ ಘಟನೆ ಮೈಸೂರು(Mysuru) ಜಿಲ್ಲೆಯ ನಂಜನಗೂಡು ತಾಲೂಕಿನ ಸುತ್ತೂರು ಹೊಸಕೋಟೆ ರಸ್ತೆಯಲ್ಲಿ ನಡೆದಿದೆ. ಸುತ್ತೂರು ಹೊಸಕೋಟೆ ರಸ್ತೆಯಲ್ಲಿ ಒಣಗಲು ಹಾಕಿದ್ದ ಹುರುಳಿ ಕಾರಿನ ಚಕ್ರಕ್ಕೆ ಸಿಲುಕಿ ಅಗ್ನಿ ಅವಘಡ ಸಂಭವಿಸಿದೆ. ನೋಡು ನೋಡುತ್ತಿದ್ದಂತೆಯೇ ಬೆಂಕಿ ಧಗಧಗಿಸಿದ್ದು, ಅಗ್ನಿ ಕೆನ್ನಾಲೆಗೆಗೆ ಕಾರು ಸುಟ್ಟು ಕರಕಲಾಗಿದೆ. ಇನ್ನು ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಐವರು ಕಾರಿನಿಂದ ಇಳಿದು ಬಚಾವ್ ಆಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕಾಗಮಿಸಿದ ಬಿಳಿಗೆರೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.