ರಾತ್ರಿಯೆಲ್ಲ ಗ್ರಾಹರಿಗೆ ಸರ್ವಿಸ್ ನೀಡುವ ಎಂಪೈರ್ ಹೋಟೆಲ್ ವಿರುದ್ಧ ಪೊಲೀಸರು ತಾಕತ್ತಿದ್ದರೆ ಕ್ರಮ ಜರುಗಿಸಲಿ: ಕಾಟೇರ ಚಿತ್ರತಂಡದ ವಕೀಲ

ರಾತ್ರಿಯೆಲ್ಲ ಗ್ರಾಹರಿಗೆ ಸರ್ವಿಸ್ ನೀಡುವ ಎಂಪೈರ್ ಹೋಟೆಲ್ ವಿರುದ್ಧ ಪೊಲೀಸರು ತಾಕತ್ತಿದ್ದರೆ ಕ್ರಮ ಜರುಗಿಸಲಿ: ಕಾಟೇರ ಚಿತ್ರತಂಡದ ವಕೀಲ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 12, 2024 | 7:33 PM

ನೋಟೀಸ್ ನೀಡಿರುವದಕ್ಕೆ ಬೇರೆ ಕಾರಣಗಳಿವೆ ಮತ್ತು ಕಾಣದ ಕೈಗಳು ಇದನ್ನೆಲ್ಲ ಮಾಡಿವೆ ಎಂದ ಅವರು ಪ್ರತಿಬಾರಿ ನಟ ದರ್ಶನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಅವರ ಏಳ್ಗೆ ಸಹಿಸಲಾಗದ ಜನ ಇಂಥದನ್ನೆಲ್ಲ ಮಾಡಿಸುತ್ತಿದ್ದಾರೆ ಎಂದು ವಕೀಲ ಹೇಳಿದರು.

ಬೆಂಗಳೂರು: ನಗರದ ಪಬ್ಬೊಂದರಲ್ಲಿ ತಡರಾತ್ರಿವರೆಗೆ ಪಾರ್ಟಿ (party in a city pub) ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟೀಸ್ ನೀಡಿದ ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಗೆ (Subramanyanagar police station) ಹಾಜರಾದ ಕಾಟೇರ ಚಿತ್ರತಂಡ (Kaatera film team), ಪೊಲೀಸರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿ ಠಾಣೆಯಿಂದ ಹೊರಬಂದ ಬಳಿಕ ಅವರ ಪರ ವಕೀಲರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಚಿತ್ರತಂಡದ ವಿರುದ್ಧ ಪೊಲೀಸರು ಯಾಕೆ ಜಾರಿಮಾಡಿದರೋ ಅರ್ಥವಾಗದ ವಿಷಯವಾಗಿದೆ, ನಗರರದಲ್ಲಿ ಹೋಟೆಲ್ ಗಳಿಗೆ ಹೋಗಿ ಊಟ ಮಾಡುವುದು ತಪ್ಪೇ? ಮಧ್ಯರಾತ್ರಿ ಕಳೆದ ನಂತರ ಯಾರೂ ಊಟ ಮಾಡಲ್ಲವೇ? ರಾಜ್ಯದ ಮುಖ್ಯಮಂತ್ರಿ ಯಾವತ್ತೂ ಅಪರಾತ್ರಿಯಲ್ಲಿ ಊಟ ಮಾಡಿಲ್ಲವೇ? ಚಿತ್ರತಂಡ ಪಾರ್ಟಿ ಮಾಡಲು ಅಲ್ಲಿಗೆ ಹೋಗಿರಲಿಲ್ಲ, ಪಬ್ ಮಾಲೀಕರೇ ಊಟಕ್ಕೆ ಆಹ್ವಾನಿಸಿದ್ದರು ಎಂದು ಒಬ್ಬ ವಕೀಲ ಹೇಳಿದರು. ನೋಟೀಸ್ ನೀಡಿರುವದಕ್ಕೆ ಬೇರೆ ಕಾರಣಗಳಿವೆ ಮತ್ತು ಕಾಣದ ಕೈಗಳು ಇದನ್ನೆಲ್ಲ ಮಾಡಿವೆ ಎಂದ ಅವರು ಪ್ರತಿಬಾರಿ ನಟ ದರ್ಶನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಅವರ ಏಳ್ಗೆ ಸಹಿಸಲಾಗದ ಜನ ಇಂಥದನ್ನೆಲ್ಲ ಮಾಡಿಸುತ್ತಿದ್ದಾರೆ. ಪೊಲೀಸರು ತಾಕತ್ತಿದ್ದರೆ ರಾತ್ರಿ ಮೂರು ಗಂಟೆಯವರೆಗೆ ಗ್ರಾಹಕರಿಗೆ ಸೇವೆ ಒದಗಿಸುವ ಎಂಪೈರ್ ಹೋಟೆಲ್ ವಿರುದ್ಧ ಕೇಸ್ ಜಡಿಯಲಿ ಎಂದು ವಕೀಲ ಸವಾಲೆಸೆದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ