ಸೋಮಾವತಿ ನದಿಗೆ ಬಿದ್ದ ಕಾರು: ಕೊಚ್ಚಿಕೊಂಡು ಹೋಗುತ್ತಿದ್ದ ದಂಪತಿಯನ್ನ ಉಳಿಸಿದ ಬಂಡೆ
ಚಿಕ್ಕಮಗಳೂರು ಜಿಲ್ಲೆಯ ಕಳಸ (Kalasa) ತಾಲೂಕಿನ ಗಣಪತಿ ಕಟ್ಟೆ ಬಳಿ ಕಾರೊಂದು ಸೋಮಾವತಿ ನದಿಗೆ (Somavati River) ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು (Bengaluru) ಮೂಲದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ದಂಪತಿಯ ಜೀವ ಉಳಿದಿದೆ. ಬಂಡೆ ಅಡ್ಡ ಸಿಗದೇ ಇದ್ದಿದ್ದರೆ ಕಾರಿನ ಸಮೇತ ದಂಪತಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು.
ಚಿಕ್ಕಮಗಳೂರು, (ಆಗಸ್ಟ್ 15): ಜಿಲ್ಲೆಯ ಕಳಸ (Kalasa) ತಾಲೂಕಿನ ಗಣಪತಿ ಕಟ್ಟೆ ಬಳಿ ಕಾರೊಂದು ಸೋಮಾವತಿ ನದಿಗೆ (Somavati River) ಉರುಳಿ ಬಿದ್ದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು (Bengaluru) ಮೂಲದ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕಾರಿಗೆ ಬಂಡೆಯೊಂದು ಅಡ್ಡ ಸಿಕ್ಕಿದ್ದರಿಂದ ದಂಪತಿಯ ಜೀವ ಉಳಿದಿದೆ. ಬಂಡೆ ಅಡ್ಡ ಸಿಗದೇ ಇದ್ದಿದ್ದರೆ ಕಾರಿನ ಸಮೇತ ದಂಪತಿ ಕೊಚ್ಚಿ ಹೋಗುವ ಸಾಧ್ಯತೆ ಇತ್ತು. ಇನ್ನೂ ಕಾರು ನದಿಗೆ ಬೀಳುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಬಂದಿದ್ದಾರೆ. ಕಾರಿಗೆ ಹಗ್ಗ ಕಟ್ಟಿ ಮೇಲೆಳೆದು ದಂಪತಿಯ ಪ್ರಾಣ ರಕ್ಷಿಸಿದ್ದಾರೆ. ಸೋಮಾವತಿ ನದಿಗೆ ತಡೆಗೋಡೆ ಇಲ್ಲ. ಹೀಗಾಗಿ ಈ ದುರ್ಘಟನೆ ಸಂಭವಿಸಿದೆ. ಈ ಹಿಮದೆಯೂ ಸಹ ಮುರ್ನಾಲ್ಕು ಅಪಘಾತಗಳು ಸಂಭವಿಸಿವೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
