ಬೈಕ್​ನ್ನ 60 ಮೀಟರ್ ಎಳೆದೊಯ್ದ ಕಾರು: ಎದೆ ಝಲ್​ ಎನಿಸುವ ಆ್ಯಕ್ಸಿಡೆಂಟ್​ ವಿಡಿಯೋ

| Updated By: ರಮೇಶ್ ಬಿ. ಜವಳಗೇರಾ

Updated on: Jan 15, 2025 | 10:50 PM

ಚಿಕ್ಕಮಗಳೂರು ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಜೆನ್ ಕಾರೊಂದು ಬೈಕ್​ಗೆ ಗುದ್ದಿ ಸುಮಾರು 60 ಮೀಟರ್​ನಷ್ಟು ದೂರು ಎಳೆದೊಯ್ದಿದೆ. ಇನ್ನು ಈ ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದರೆ ಎದೆ ಝಲ್​ ಎನ್ನುತ್ತೆ.

ಚಿಕ್ಕಮಗಳೂರು, (ಜನವರಿ 15): ನಗರದ ಬೈಪಾಸ್ ಸಮೀಪದ ಕುರುವಂಗಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಾರಿಗೆ ಸಿಲುಕಿದ ಬೈಕ್​ನ್ನ 60 ಮೀಟರ್ ಎಳೆದೊಯ್ದಿದ್ದು, ಕಾರು ಉಜ್ಜಿಕೊಂಡು ಹೋಗುವ ರಭಸಕ್ಕೆ ಬೆಂಕಿಯ ಕಿಡಿ ಹಾರಿದೆ. ಇನ್ನು ಬೈಕ್ ಸವಾರರ ರಾಜಶೇಖರ್​ಗೆ ಗಂಭೀರ ಗಾಯಗಳಾಗಿವೆ. ರಾಜಶೇಖರ್ ಕೆಲಸ ಮುಗಿಸಿ ಮನಗೆ ಹೋಗುವಾಗ ಈ ಅಪಘಾತ ಸಂಭವಿಸಿದ್ದು, ಜೆನ್ ಕಾರು ಚಾಲಕ ನಿಲ್ಲಿಸದೇ ಫಾಸ್ಟ್ ಆಗಿ ಹೋಗಿದ್ದಾನೆ. ಇನ್ನು ಈ ದೃಶ್ಯ ಸಿಟಿ ಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿದರೆ ಎದೆ ಝಲ್​ ಎನ್ನುತ್ತೆ. ಬೈಕ್ ಸವಾರ ರಾಜಶೇಖರ್​ ಸೊಂಟದ ಮೂಳೆ ಮುರಿದಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ‌ದಾಖಲಾಗಿದೆ.