ನಿಯಂತ್ರಣ ತಪ್ಪಿ ಕೆರೆಗೆ ಬಿದ್ದ ಕಾರು; ಬೋಟ್​​ನಲ್ಲಿ ದೇವರಂತೆ ಬಂದು ಚಾಲಕನನ್ನು ಕಾಪಾಡಿದ ಯುವಕ

Updated on: Nov 29, 2025 | 7:46 PM

ನೀರಿನಲ್ಲಿ ಮುಳುಗಿದ್ದ ವಾಹನದಿಂದ ಚಾಲಕ ಶಿವಂನನ್ನು ಹೊರಗೆಳೆಯುವ ಪ್ರೇಕ್ಷಕರನ್ನು ತೋರಿಸುವ ಒಂದು ಮನಕಲಕುವ ವೀಡಿಯೊ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತ್ವರಿತವಾಗಿ ವೈರಲ್ ಆಗಿದೆ. ಕಾರಿನೊಳಗೆ ಸಿಲುಕಿದ್ದ 25 ವರ್ಷದ ವ್ಯಕ್ತಿಯನ್ನು ಮುಳುಗುತ್ತಿದ್ದ ಕಾರಿನಿಂದ ಅಚ್ಚರಿಯ ರೀತಿಯಲ್ಲಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ವೇಗವಾಗಿ ಬಂದ ಮಾರುತಿ ಸುಜುಕಿ ಎರ್ಟಿಗಾ ಕಾರು ಕೆರೆಯ ಬಳಿ ರಸ್ತೆಯಿಂದ ಬ್ಯಾಲೆನ್ಸ್ ತಪ್ಪಿ ಬಿದ್ದಿದೆ. ಆಗ ಬೋಟ್​ನಲ್ಲಿ ಹೋದ ಯುವಕ ಕೆರೆಯ ಮಧ್ಯೆ ಮುಳುಗುತ್ತಿದ್ದ ಕಾರಿನ ಕಿಟಕಿಯಿಂದ ಚಾಲಕನನ್ನು ಹೊರಗೆಳೆದು ಪ್ರಾಣ ಉಳಿಸಿದ್ದಾನೆ.

ನವದೆಹಲಿ, ನವೆಂಬರ್ 29: ಉತ್ತರ ಪ್ರದೇಶದ ಪಿಲಿಭಿತ್‌ನಲ್ಲಿ ನಾಟಕೀಯ ರಕ್ಷಣಾ ಕಾರ್ಯಾಚರಣೆ ನಡೆಯಿತು. ರಸ್ತೆಯಲ್ಲಿ ಹೋಗುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆಬದಿಯ ಕೆರೆಗೆ ಬಿದ್ದಿದೆ. ಈ ವೇಳೆ ಕಾರಿನೊಳಗೆ ಸಿಲುಕಿದ್ದ 25 ವರ್ಷದ ವ್ಯಕ್ತಿಯನ್ನು ಮುಳುಗುತ್ತಿದ್ದ ಕಾರಿನಿಂದ ಅಚ್ಚರಿಯ ರೀತಿಯಲ್ಲಿ ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ವೇಗವಾಗಿ ಬಂದ ಮಾರುತಿ ಸುಜುಕಿ ಎರ್ಟಿಗಾ ಕಾರು (Car) ಕೆರೆಯ ಬಳಿ ರಸ್ತೆಯಿಂದ ಬ್ಯಾಲೆನ್ಸ್ ತಪ್ಪಿ ಬಿದ್ದಿದೆ. ಆಗ ಬೋಟ್​ನಲ್ಲಿ ಹೋದ ಯುವಕ ಕೆರೆಯ ಮಧ್ಯೆ ಮುಳುಗುತ್ತಿದ್ದ ಕಾರಿನ ಕಿಟಕಿಯಿಂದ ಚಾಲಕನನ್ನು ಹೊರಗೆಳೆದು ಪ್ರಾಣ ಉಳಿಸಿದ್ದಾನೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ