ಸೇತುವೆ ಮೇಲಿಂದ ನೀರಿಗೆ ಬಿದ್ದ ಕಾರು, ದಂಪತಿಯನ್ನು ರಕ್ಷಿಸಿ ಕಾರು ಮೇಲೆತ್ತಿದ ಗ್ರಾಮಸ್ಥರು!
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಪ್ಪ ಕೊಣ್ಣೂ ಮತ್ತು ಸೀಮಾ ಅವರನ್ನು ರಕ್ಷಿಸಿದ ಬಳಿಕ ಗ್ರಾಮಸ್ಥರು ಕ್ರೇನ್ ಮೂಲಕ ಕಾರನ್ನೂ ಮೇಲೆತ್ತಿದ್ದಾರೆ.
ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಸೇತುವೆ ಮೇಲಿಂದ ಸುಮಾರು ಹತ್ತು ಅಡಿ ಕೆಳಗಿರುವ ಹಳ್ಳಕ್ಕೆ ಬಿದ್ದರೂ ಚಾಲಕ ಮತ್ತು ಅವರ ಪತ್ನಿ ಸ್ಥಳೀಯರ ನೆರವಿನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ನಡೆದಿರುವುದು ಬೆಳಗಾವಿ ಜಿಲ್ಲೆ ಗೋಕಾಕ (Gokak) ತಾಲ್ಲೂಕಿನ ಅಂಕಲಗಿ ಗ್ರಾಮದ ಹೊರಭಾಗದಲ್ಲಿ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಸಿದ್ದಪ್ಪ ಕೊಣ್ಣೂರ (Siddappa Konnur) ಮತ್ತು ಸೀಮಾ (Seema) ಅವರನ್ನು ರಕ್ಷಿಸಿದ ಬಳಿಕ ಗ್ರಾಮಸ್ಥರು ಕ್ರೇನ್ ಮೂಲಕ ಕಾರನ್ನೂ ಮೇಲೆತ್ತಿದ್ದಾರೆ. ದಂಪತಿ ಪಾಲಿಗೆ ಅವರು ನಿಜಕ್ಕೂ ಆಪತ್ಬಾಂಧವರು ಮಾರಾಯ್ರೇ.