ಬೆಂಗಳೂರು: ಕರುವಿನ ಮೇಲೆ ಕಾರು ಹರಿಸಿ ಕ್ರೌರ್ಯ ಮೆರೆದ ವ್ಯಕ್ತಿ

Edited By:

Updated on: Mar 18, 2024 | 2:15 PM

ಕರುವಿನ ಮೇಲೆ ಕಾರು ಹರಿಸಿ ಚಾಲಕ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕರುವಿನ ಹೊಟ್ಟೆ, ಕಾಲಿಗೆ ಗಂಭೀರ ಗಾಯವಾಗಿದೆ. ಚಾಲಕನ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಮಾರ್ಚ್​ 18: ಕರುವಿನ (Calf) ಮೇಲೆ ಕಾರು (Car) ಹರಿಸಿ ಚಾಲಕ ಪರಾರಿಯಾಗಿರುವ ಘಟನೆ ಮಹಾಲಕ್ಷ್ಮೀ ಲೇಔಟ್ ಠಾಣೆಯ ಹಿಂಭಾಗದ ರಸ್ತೆಯಲ್ಲಿ ನಡೆದಿದೆ. ಘಟನೆಯಲ್ಲಿ ಕರುವಿನ ಹೊಟ್ಟೆ, ಕಾಲಿಗೆ ಗಂಭೀರ ಗಾಯವಾಗಿದೆ. ಕಳೆದ ವಾರ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಲಕನ ಕೃತ್ಯದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ಅಪಘಾತ

ಮಡಿಕೇರಿ: ಅಪ್ರಾಪ್ತ ಚಲಾಯಿಸುತ್ತಿದ್ದ ಕಾರು ರಸ್ತೆ ಬದಿ ನಿಂತಿದ್ದ ಮಹಿಳೆಯರಿಗೆ ಗುದ್ದಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪ‌ ಬಳಿ ನಡೆದಿದೆ. ಶಾಂತಮ್ಮ(45), ಕಾವ್ಯ (25) ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಕಾರು ಬಸವನಹಳ್ಳಿ ಕಡೆಯಿಂದ ಅತಿವೇಗದಲ್ಲಿ ಬರುತ್ತಿತ್ತು. ಅಪಘಾತದ ಬಳಿಕ‌ ಕಾರು ಮೂರು ಪಲ್ಟಿ ಹೊಡೆದಿದೆ. ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ದೃಷ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ