Karnataka Assembly Polls: ಪೊಲೀಸರು ಸೀಜ್ ಮಾಡಿರುವ ಸೀರೆ, ಮೊಬೈಲ್ ಫೋನ್ ಗಳಿದ್ದ ಕಾರು ಜಯನಗರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿಗೆ ಸೇರಿದ್ದು!
ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗ ತಿಲಕ್ ಮಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಬೆಂಗಳೂರು: ನಗರದ ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಚೆಕ್ ಪೋಸ್ಟ್ ಒಂದರ ಬಳಿ ಪೊಲೀಸರು ಮತ್ತು ಫ್ಲೈಯಿಂಗ್ ಸ್ಕ್ವ್ಯಾಡ್ ಜಪ್ತಿ ಮಾಡಿದ ಕಾರು ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಸೌಮ್ಯರೆಡ್ಡಿ (Sowmya Reddy) ಅವರಿಗೆ ಸೇರಿದ್ದೆಂಬ ವಿಷಯ ಬಹಿರಂಗಗೊಂಡಿದೆ. ಸೀಜ್ ಮಾಡಿದ ಕಾರಲ್ಲಿ 23 ಸೀರೆ, 16 ಶಾಲು ಮತ್ತು ಹಲವಿ ಮೊಬೈಲ್ ಫೋನ್ ಗಳು ಪತ್ತೆಯಾಗಿವೆ. ಈ ವಸ್ತುಗಳನ್ನೆಲ್ಲ ಮತದಾರರಿಗೆ (voters) ಹಂಚಲು ತೆಗೆದುಕೊಂಡು ಹೋಗಲಾಗುತ್ತಿತ್ತೇ ಎಂಬ ಸಂಗತಿ ಇನ್ನೂ ದೃಢಪಡಬೇಕಿದೆ. ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಚುನಾವಣಾ ಆಯೋಗ ತಿಲಕ್ ಮಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 06, 2023 06:32 PM
Latest Videos