ಮಂಡ್ಯದಲ್ಲೊಂದು ಪ್ರೇಮ-ಕಾಮ-ವಂಚನೆ ಪ್ರಕರಣ, ಪ್ರೇಮಿ ಮನೆ ಮುಂದೆ ಪ್ರೇಯಸಿ ಧರಣಿ!

|

Updated on: Jan 09, 2024 | 5:59 PM

ಅವನು ಓದಿದ್ದು ಮೆಟ್ರಿಕ್ ವರೆಗೆ ಮಾತ್ರ, ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಸುಳ್ಳು ಹೇಳಿದ್ದಾನೆ, ಅಸಲಿಗೆ ಅವನು ಬೆಂಗಳೂರಿನ ಯಾವುದೋ ಗುಜರಿ ಅಂಗಡಿಯಲ್ಲಿ ಕೆಲಸ ಮಾಡೋದು ಅಂತ ಯುವತಿ ಹೇಳುತ್ತಾರೆ. ತನಗೆ ನ್ಯಾಯ ಬೇಕು, ದೈಹಿಕವಾಗಿ ಬಳಸಿಕೊಂಡಿರುವ ಮಂಜು ತನ್ನನ್ನು ಮದುವೆಯಾಗಬೇಕೆಂದು ಯುವತಿ ಅವನ ಮನೆ ಮುಂದೆ ಧರಣಿಗೆ ಕೂತಿದ್ದಾರೆ.

ಮಂಡ್ಯ: ಮತ್ತೊಂದು ಪ್ರೇಮ-ಕಾಮ-ವಂಚನೆಯ ಪ್ರಕರಣ ಸದ್ದುಮಾಡುತ್ತಿದೆ. ಇದು ಮಂಡ್ಯ ಜಿಲ್ಲೆಯ ಕತೆ. ವಿಷಯ ಏನೆಂದರೆ ತನಗೆ ಮೋಸವಾಗಿದೆ ಅಂತ ಮಾಧ್ಯಮಗಳಿಗೆ ಹೇಳುತ್ತಿರುವ ಯುವತಿ ಮೈಸೂರು (Mysuru) ಜಿಲ್ಲೆ ನಂಜನಗೂಡಿನ ನಿವಾಸಿ. ಮಂಡ್ಯ ಜಿಲ್ಲೆಯ ಮಳವಳ್ಳಿ (Malavalli) ತಾಲ್ಲೂಕಿನ ಬಳ್ಳಗೆರೆಯ ಯುವಕ ಮಂಜು (Manju) ಮತ್ತು ತಾನು ಆಕೆ ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು ಈಗ ಅವನು ಬೇರೆ ಜಾತಿಯವಳು ಎಂಬ ಕಾರಣಕ್ಕೆ ಮದುವೆಯಾಗಲ್ಲ ಅನ್ನುತ್ತಿದ್ದಾನಂತೆ. ಸುಮಾರು 5 ವರ್ಷಗಳಿಂದ ಮದುವೆಯಾಗುವ ಭರವಸೆ ನೀಡಿ ದೈಹಿಕವಾಗಿ ಮಂಜು ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಯುವತಿ ಹೇಳುತ್ತಾರೆ. ಅವನು ಓದಿದ್ದು ಮೆಟ್ರಿಕ್ ವರೆಗೆ ಮಾತ್ರ, ಟ್ರಾವೆಲ್ ಏಜೆನ್ಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಅಂತ ಸುಳ್ಳು ಹೇಳಿದ್ದಾನೆ, ಅಸಲಿಗೆ ಅವನು ಬೆಂಗಳೂರಿನ ಯಾವುದೋ ಗುಜರಿ ಅಂಗಡಿಯಲ್ಲಿ ಕೆಲಸ ಮಾಡೋದು ಅಂತ ಯುವತಿ ಹೇಳುತ್ತಾರೆ. ತನಗೆ ನ್ಯಾಯ ಬೇಕು, ದೈಹಿಕವಾಗಿ ಬಳಸಿಕೊಂಡಿರುವ ಮಂಜು ತನ್ನನ್ನು ಮದುವೆಯಾಗಬೇಕೆಂದು ಯುವತಿ ಅವನ ಮನೆ ಮುಂದೆ ಧರಣಿಗೆ ಕೂತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ