Video: ಮೊಬೈಲ್ ಅಂಗಡಿ ಮಾಲೀಕನ ಗಮನ ಬೇರೆಡೆ ಸೆಳೆದು ಹಣ ಕದ್ದ ಮಹಿಳೆ
ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮೊಬೈಲ್ ಶೋರೂಮನ್ನಲ್ಲಿ ಮಾಲೀಕನ ಗಮನ ಬೇರೆಡೆಗೆ ತಿರುಗಿಸಿ, ಕೌಂಟರ್ನಲ್ಲಿದ್ದ ನಗದನ್ನು ಕದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂಗಡಿ ಮಾಲೀಕರು ಮೊಬೈಲ್ಗಳನ್ನು ತೋರಿಸುವುದರಲ್ಲಿ ನಿರತರಾಗಿರುತ್ತಾರೆ. ಅವರು ಅತ್ತ ವಿವರಿಸುತ್ತಿದ್ದಂತೆ, ಈಕೆ ತೆರೆದ ನಗದು ಡ್ರಾಯರ್ ಕಡೆಗೆ ಕೈ ಹಾಕುತ್ತಾಳೆ.
ಝಾನ್ಸಿ, ಡಿಸೆಂಬರ್ 31: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮೊಬೈಲ್ ಶೋರೂಮನ್ನಲ್ಲಿ ಮಾಲೀಕನ ಗಮನ ಬೇರೆಡೆಗೆ ತಿರುಗಿಸಿ, ಕೌಂಟರ್ನಲ್ಲಿದ್ದ ನಗದನ್ನು ಕದ್ದಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಅಂಗಡಿ ಮಾಲೀಕರು ಮೊಬೈಲ್ಗಳನ್ನು ತೋರಿಸುವುದರಲ್ಲಿ ನಿರತರಾಗಿರುತ್ತಾರೆ. ಅವರು ಅತ್ತ ವಿವರಿಸುತ್ತಿದ್ದಂತೆ, ಈಕೆ ತೆರೆದ ನಗದು ಡ್ರಾಯರ್ ಕಡೆಗೆ ಕೈ ಹಾಕುತ್ತಾಳೆ.
ಒಂದು ಬಂಡಲ್ ಹಣವನ್ನು ಎತ್ತಿಕೊಂಡು ಸಂಭಾಷಣೆಗೆ ಅಡ್ಡಿಯಾಗದಂತೆ ತನ್ನ ಬಟ್ಟೆ ಅಥವಾ ಚೀಲಕ್ಕೆ ಹಾಕುತ್ತಾಳೆ. ಅಂಗಡಿಯಿಂದ ಹೊರಡುವ ಮೊದಲು ನಿಜವಾದ ಗ್ರಾಹಕರಂತೆ ವರ್ತಿಸುತ್ತಾಳೆ. ಇದೆಲ್ಲವೂ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

