Daily Devotional: ಇಂದು ಮುಕ್ಕೋಟಿ ಏಕಾದಶಿ ಒಂದು ಪುಣ್ಯಕ್ಕೆ 3 ಕೋಟಿ ಫಲ!
ವೈಕುಂಠ ದ್ವಾದಶಿ ಅಥವಾ ಮುಕ್ಕೋಟಿ ದ್ವಾದಶಿಯ ಮಹತ್ವವನ್ನು ತಿಳಿಯೋಣ. ವೈಕುಂಠ ಏಕಾದಶಿಯ ಮರುದಿನ ಆಚರಿಸಲಾಗುವ ಈ ದ್ವಾದಶಿ, ಏಕಾದಶಿ ವ್ರತದ ಪಾರಣೆಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, 33 ಕೋಟಿ ದೇವತೆಗಳು ವೈಕುಂಠದಲ್ಲಿ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಪಡೆದ ದಿನ ಇದಾಗಿದೆ. ಯಾವುದೇ ಕಾರ್ಯಕ್ರಮದ ಅಂತ್ಯವು ಮಹತ್ವಪೂರ್ಣವಾಗಿರುವಂತೆ, ವೈಕುಂಠ ದ್ವಾದಶಿ ಏಕಾದಶಿ ವ್ರತದ ಪರಿಸಮಾಪ್ತಿ ಮತ್ತು ಪೂರ್ಣ ಫಲ ಪ್ರಾಪ್ತಿಯ ದಿನವಾಗಿದೆ.
ಬೆಂಗಳೂರು, ಡಿಸೆಂಬರ್ 31: ವೈಕುಂಠ ದ್ವಾದಶಿ ಅಥವಾ ಮುಕ್ಕೋಟಿ ದ್ವಾದಶಿಯ ಮಹತ್ವವನ್ನು ತಿಳಿಯೋಣ. ವೈಕುಂಠ ಏಕಾದಶಿಯ ಮರುದಿನ ಆಚರಿಸಲಾಗುವ ಈ ದ್ವಾದಶಿ, ಏಕಾದಶಿ ವ್ರತದ ಪಾರಣೆಗೆ ಅತ್ಯಂತ ಪ್ರಶಸ್ತವಾದ ದಿನವಾಗಿದೆ. ಪೌರಾಣಿಕ ಹಿನ್ನೆಲೆಯ ಪ್ರಕಾರ, 33 ಕೋಟಿ ದೇವತೆಗಳು ವೈಕುಂಠದಲ್ಲಿ ಉತ್ತರ ದ್ವಾರದ ಮೂಲಕ ವಿಷ್ಣುವಿನ ದರ್ಶನ ಪಡೆದ ದಿನ ಇದಾಗಿದೆ. ಯಾವುದೇ ಕಾರ್ಯಕ್ರಮದ ಅಂತ್ಯವು ಮಹತ್ವಪೂರ್ಣವಾಗಿರುವಂತೆ, ವೈಕುಂಠ ದ್ವಾದಶಿ ಏಕಾದಶಿ ವ್ರತದ ಪರಿಸಮಾಪ್ತಿ ಮತ್ತು ಪೂರ್ಣ ಫಲ ಪ್ರಾಪ್ತಿಯ ದಿನವಾಗಿದೆ. ಈ ದಿನ ಉಪವಾಸವನ್ನು ಮುರಿದು ಪಾರಣ ಮಾಡುವುದು, ಅನ್ನದಾನ ಮಾಡುವುದು, ನಿರ್ಗತಿಕರಿಗೆ ಸಹಾಯ ಮಾಡುವುದು ನೂರು ಯಜ್ಞಗಳ ಫಲಕ್ಕೆ ಸಮಾನ. ಶುದ್ಧ ಸಾತ್ವಿಕ ಆಹಾರ ಸೇವಿಸಿ, ಓಂ ನಮೋ ವೆಂಕಟೇಶಾಯ ಮಂತ್ರವನ್ನು ಜಪಿಸುವುದರಿಂದ ಶುಭ ಫಲಗಳು ದೊರೆಯುತ್ತವೆ. ಇದು ಕೇವಲ ವಿಷ್ಣುವಿನ ಅನುಗ್ರಹ ಮಾತ್ರವಲ್ಲದೆ, ಸಮಸ್ತ ದೇವತೆಗಳ ಆಶೀರ್ವಾದಕ್ಕೂ ಪಾತ್ರವಾಗುವಂತಹ ದಿನ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

