ತಲಕಾವೇರಿಯಲ್ಲಿ ‘ತೀರ್ಥರೂಪಿಣಿ’ಯಾಗಿ ದರ್ಶನ ನೀಡಿದ ಕಾವೇರಿ, ಜೀವನದಿ ಉಗಮ ಸ್ಥಾನದಲ್ಲಿ ಹಬ್ಬದ ಸಡಗರ

| Updated By: ಸಾಧು ಶ್ರೀನಾಥ್​

Updated on: Oct 17, 2020 | 12:54 PM

ಮಡಿಕೇರಿ: ಕಾವೇರಿ. ಕನ್ನಡ ನಾಡಿನ ಜೀವನದಿ.. ಕೊಡಗಿನ ಜೀವದಾತೆ.. ಕೊಡವರ ಕುಲದೇವತೆ.. ಪ್ರತಿವರ್ಷಕ್ಕೊಮ್ಮೆ ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡೋ ಕಾವೇರಮ್ಮ ಇವತ್ತು ಉಕ್ಕಿ ಹರಿದಿದ್ದಾಳೆ. ಭೂಲೋಕದ ಜೀವದಾತೆ ಕಾವೇರಿ ಸನ್ನಿಧಿಯಲ್ಲಿ ದೇವಲೋಕದ ಕಳೆ.. ಹೌದು.. ಕನ್ನಡನಾಡಿನ ಜೀವನದಿ ತೀರ್ಥಸ್ವರೂಪಿಣಿಯಾಗಿ ದರ್ಶನ ಕೊಟ್ಟಿದ್ದಾಳೆ. ಈ ದಿವ್ಯಗಳಿಗೆಯನ್ನ ಕಣ್ತುಂಬಿಕೊಳ್ಳಲು ತಲಕಾವೇರಿ ಸಜ್ಜಾಗಿತ್ತು. ಮಮತೆಯ ಮಾತೆ.. ಭಾಗ್ಯದ ದಾತೆಗೆ ಜನ ಭಕ್ತಿಯಿಂದ ವಂದಿಸಿ ಜೀವದಾತೆಯ ದರ್ಶನ ಪಡೆದಿದ್ದಾರೆ. ದಕ್ಷಿಣ ಗಂಗೆ ಕರುನಾಡ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿಂದು ಹಬ್ಬದ ಸಡಗರ.. ಕೊಡವರ ಕುಲದೇವತೆ […]

ತಲಕಾವೇರಿಯಲ್ಲಿ ತೀರ್ಥರೂಪಿಣಿ’ಯಾಗಿ ದರ್ಶನ ನೀಡಿದ ಕಾವೇರಿ, ಜೀವನದಿ ಉಗಮ ಸ್ಥಾನದಲ್ಲಿ ಹಬ್ಬದ ಸಡಗರ
Follow us on

ಮಡಿಕೇರಿ: ಕಾವೇರಿ. ಕನ್ನಡ ನಾಡಿನ ಜೀವನದಿ.. ಕೊಡಗಿನ ಜೀವದಾತೆ.. ಕೊಡವರ ಕುಲದೇವತೆ.. ಪ್ರತಿವರ್ಷಕ್ಕೊಮ್ಮೆ ತೀರ್ಥಸ್ವರೂಪಿಣಿಯಾಗಿ ದರ್ಶನ ನೀಡೋ ಕಾವೇರಮ್ಮ ಇವತ್ತು ಉಕ್ಕಿ ಹರಿದಿದ್ದಾಳೆ.

ಭೂಲೋಕದ ಜೀವದಾತೆ ಕಾವೇರಿ ಸನ್ನಿಧಿಯಲ್ಲಿ ದೇವಲೋಕದ ಕಳೆ.. ಹೌದು.. ಕನ್ನಡನಾಡಿನ ಜೀವನದಿ ತೀರ್ಥಸ್ವರೂಪಿಣಿಯಾಗಿ ದರ್ಶನ ಕೊಟ್ಟಿದ್ದಾಳೆ. ಈ ದಿವ್ಯಗಳಿಗೆಯನ್ನ ಕಣ್ತುಂಬಿಕೊಳ್ಳಲು ತಲಕಾವೇರಿ ಸಜ್ಜಾಗಿತ್ತು. ಮಮತೆಯ ಮಾತೆ.. ಭಾಗ್ಯದ ದಾತೆಗೆ ಜನ ಭಕ್ತಿಯಿಂದ ವಂದಿಸಿ ಜೀವದಾತೆಯ ದರ್ಶನ ಪಡೆದಿದ್ದಾರೆ.

ದಕ್ಷಿಣ ಗಂಗೆ ಕರುನಾಡ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿಂದು ಹಬ್ಬದ ಸಡಗರ.. ಕೊಡವರ ಕುಲದೇವತೆ ಕರ್ನಾಟಕದ ಜೀವನದಿ ತಲಕಾವೇರಿಯ ತೀರ್ಥೋದ್ಬವ ವರ್ಷಕ್ಕೊಮ್ಮೆ ಘಟಿಸುತ್ತೆ. ಈ ವಿಸ್ಮಯ ಇಂದು ಮುಂಜಾನೆ 7 ಗಂಟೆ 5 ನಿಮಿಷಕ್ಕೆ ಕನ್ಯಾ ಲಗ್ನದಲ್ಲಿ ಪವಿತ್ರ ತೀರ್ಥೋದ್ಭವ ಜರುಗಿದ್ದು ಬ್ರಹ್ಮ ಕುಂಡಿಕೆಯಿಂದ ಪವಿತ್ರ ತೀರ್ಥ ಉಕ್ಕಿಬಂದಿದೆ. ಬೆಳಗ್ಗೆಯಿಂದಲೇ ತಲಕಾವೇರಿಯಲ್ಲಿ ನಾನಾ ಪೂಜಾ ಕೈಂಕರ್ಯಗಳು ನಡೆದಿದ್ದು, ಅರ್ಚಕರ ತಂಡ ಕಾವೇರಿ ಮಾತೆಯ ಸ್ವಾಗತ ಮಾಡಿದ್ದಾರೆ.

ತೀರ್ಥೋದ್ಭವಕ್ಕೆ ಕೊಡಗು ಜಿಲ್ಲಾಡಳಿತ ಹಾಗೂ ದೇವಾಲಯ ವ್ಯವಸ್ಥಾಪನಾ ಸಮಿತಿ ಪೂರ್ವ ತಯಾರಿ ಮಾಡಿಕೊಂಡಿತ್ತು. ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತರಿಗೆ ಕೊವಿಡ್ ಟೆಸ್ಟ್ ಕಡ್ಡಾಯವಾಗಿದ್ದು, ನೆಗೆಟಿವ್ ರಿಪೋರ್ಟ್ ಸಮೇತ ಬರುವವರಿಗೆ ಮಾತ್ರ ಭಾಗಮಂಡಲ ಪ್ರವೇಶಿಸುವ ಅವಕಾಶ ನೀಡಲಾಗಿತ್ತು.

ಇನ್ನು 50 ರಿಂದ 55 ಜನರು ಮಾತ್ರ ತೀರ್ಥೋದ್ಭವದ ಸಂದರ್ಭ ಹಾಜರಿರುವಂತೆ ಸೂಚನೆ ನೀಡಲಾಗಿತ್ತು. ತೀರ್ಥೋದ್ಭವದ ನಂತರ ಭಕ್ತಾಧಿಗಳು ಕೊವಿಡ್ ಮಾರ್ಗಸೂಚಿಯನ್ವಯ ಕಾವೇರಿ ದರ್ಶನ ಪಡೆಯಲು ಅನುಮತಿ ನೀಡಲಾಗಿತ್ತು. ಇನ್ನೂ ಈ ಬಾರಿ ಕಾವೇರಿ ಬ್ರಹ್ಮಕುಂಡಿಕೆಯ ಎದುರು ಭಾಗದಲ್ಲಿರುವ ಕೊಳದಲ್ಲಿ ಸ್ನಾನ ಮಾಡಲು ಅವಕಾಶವಿರಲಿಲ್ಲ. ಜೊತೆಗೆ ಅನ್ನದಾನ ಸೇರಿದಂತೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ಇರಲಿಲ್ಲ. ಧಾರ್ಮಿಕ ಆಚರಣೆಗಷ್ಟೆ ಅವಕಾಶವನ್ನು ಕಲ್ಪಿಸಲಾಗಿತ್ತು. ಈ ಬಾರಿ ತೀರ್ಥವನ್ನು ವಾಹನದಲ್ಲಿ ತೆಗೆದುಕೊಂಡು ಹೋಗಿ ಜಿಲ್ಲೆಯ ವಿವಿಧೆಡೆ ವಿತರಣೆ ಮಾಡುವುದನ್ನು ರದ್ದುಪಡಿಸಲಾಗಿದೆ.

ಇಂದಿನಿಂದ ಆರಂಭವಾಗಿರುವ ಕಾವೇರಿ ತುಲಾ ಸಂಕ್ರಮಣ ಒಂದು ತಿಂಗಳು ನಡೆಯಲಿದೆ. ಈ ಅವಧಿಯಲ್ಲಿ ಇಲ್ಲಿ ಪವಿತ್ರ ಸ್ನಾನಮಾಡಿ, ತೀರ್ಥ ಸ್ವೀಕರಿಸಿದರೆ ಪುಣ್ಯ ಪ್ರಾಪ್ತಿಯಾಗುವುದೆಂಬ ನಂಬಿಕೆ ಭಕ್ತರದ್ದು. ಆದ್ರೆ ಕೊರೊನಾದಿಂದಾಗಿ ತಲಕಾವೇರಿಯಲ್ಲಿ ಪವಿತ್ರ ಸ್ನಾನಕ್ಕೆ ಬ್ರೇಕ್ ಹಾಕಲಾಗಿದೆ.

Published On - 7:20 am, Sat, 17 October 20