ಮಾಂಜ್ರಾ ನದಿ ಸೇತುವೆ ಮೇಲೆ ಯುವಕರ ಹುಚ್ಚಾಟ.. ನೀವೇ ನೋಡಿ

ಮಾಂಜ್ರಾ ನದಿ ಸೇತುವೆ ಮೇಲೆ ಯುವಕರ ಹುಚ್ಚಾಟ.. ನೀವೇ ನೋಡಿ

ಬೀದರ್: ಜಿಲ್ಲೆಯಲ್ಲಿ ಮಾಂಜ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದೆ. ಆದರೂ ಮಾಂಜ್ರಾ ನದಿ ಸೇತುವೆ ಮೇಲೆ ಯುವಕರ ಹುಚ್ಚಾಟ ಮೇರೆ ಮೀರಿದ್ದು, ಈಜುವ ಹುಚ್ಚು ಸಾಹಸ ಮಾಡುತ್ತಾ 50 ಅಡಿ ಎತ್ತರದ ಸೇತುವೆ ಮೇಲಿನಿಂದ ಯುವಕರು ಜಿಗಿ ಜಿಗಿಯುತ್ತಿದ್ದಾರೆ.

ಜಿಲ್ಲೆಯ ಕೌಠಾ ಗ್ರಾಮದಲ್ಲಿರುವ ಮಾಂಜ್ರಾ ಸೇತುವೆ ಮೇಲೆ ತುಂಬಿ ಹರಿಯುತ್ತಿರುವ ನದಿಗೆ ಯುವಕರು ಹಾರುತ್ತಿದ್ದಾರೆ. ನದಿಗೆ ಇಳಿಯದಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶಕ್ಕೂ ಡೋಂಟ್ ಕೇರ್ ಅನ್ನುತ್ತಿದ್ದಾರೆ.