ಈ ರಾಶಿಯ ವ್ಯಾಪಾರಿಗಳು ಇಂದು ನಷ್ಟ, ಉದ್ವೇಗ ಉಂಟಾಗಬಹುದು
ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವಸಂತ ಋತುವಿನ ಚೈತ್ರ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ, ಬುಧವಾರ ಸಂಬಂಧ ಮರು ನಿರ್ಮಾಣದಲ್ಲಿ ಸೋಲು, ಬಲ್ಲವರಿಂದ ಸಲಹೆ, ಕೆಣಕುವವರ ಎದುರು ನಗೆಪಾಟಲು, ಔದ್ಯೋಗಿಕ ಚಿಂತೆ ಇವು ಇಂದಿನ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ವಸಂತ, ಸೌರ ಮಾಸ: ಮೀನ ಮಾಸ, ಮಹಾನಕ್ಷತ್ರ : ರೇವತೀ, ಮಾಸ: ಚೈತ್ರ, ಪಕ್ಷ: ಶುಕ್ಲ, ವಾರ: ಬುಧ, ತಿಥಿ : ಪಂಚಮೀ, ನಿತ್ಯನಕ್ಷತ್ರ: ಕೃತ್ತಿಕಾ, ಯೋಗ: ಪ್ರೀತಿ, ಕರಣ : ಗರಜ, ಸೂರ್ಯೋದಯ – 06:28 am, ಸೂರ್ಯಾಸ್ತ – 06:43 pm, ಇಂದಿನ ಶುಭಾಶುಭಕಾಲ: ರಾಹು ಕಾಲ 12:36 – 14:08, ಯಮಘಂಡ ಕಾಲ 08:01 – 09:32, ಗುಳಿಕ ಕಾಲ 11:04-12:36
ಮೇಷ ರಾಶಿ: ಯಾರದ್ದಾದರೂ ಬೆಳವಣಿಗೆಗೆ ಕಾರಣವಾದರೂ ಹೇಳಿಕೊಳ್ಳುವಂತಿಲ್ಲ. ಇಂದು ಮನಸ್ಸಿನ ಏರಿಳಿತಗಳಿಂದ ಜೊತೆಗಾರರಿಗೆ ಕಷ್ಟವಾದೀತು. ನಿಮ್ಮ ಇತರರು ಆಡುವ ಮಾತಿನಿಂದ ಸಂತಸ. ಕುಟುಂಬದ ಆಪ್ತರ ಆರೋಗ್ಯದ ಬಗ್ಗೆ ಕಾಳಜಿ ಇರುವುದು. ಇಂದು ವ್ಯಾಪಾರಿಗಳಿಗೆ ನಷ್ಟ ಹಾಗೂ ಉದ್ವೇಗದ ಉಂಟಾಗಬಹುದು. ವಾಹನ ಖರೀದಿಗೆ ಹೆಚ್ಚು ಒತ್ತಡ ಬರಬಹುದು. ಇಂದು ನಿಮ್ಮ ಮಾತು ಮಿತಿಯನ್ನು ಮೀರಬಹುದು. ಅಧಿಕ ವೇತನದ ಉದ್ಯೋಗಕ್ಕೆ ಅವಕಾಶವು ಬರಬಹುದು. ಯೋಚಿಸಿ ತೀರ್ಮಾನ ಮಾಡಿ. ಸ್ನೇಹಕ್ಕೆ ಒತ್ತಾಯ ಮಾಡುವುದು ಬೇಡ. ಅಳತೆ ಮೀರಿ ವರ್ತಿಸುವುದು ಬೇಡ. ಸಂಗಾತಿಯ ವಿಚಾರದಲ್ಲಿ ನಿಮಗೆ ಅಸಮಾಧಾನ ಆಗುವುದು. ನಿಮ್ಮನ್ನು ಇಷ್ಟಪಡುವವರಿಗೆ ಸಮಯವನ್ನು ಕೊಡದೇ ಅಹಂಕಾರ ತೋರಿಸುವಿರಿ. ನಿಮ್ಮ ಸಹಾಯ ಗುಣವನ್ನು ದುರ್ಬಳಕೆ ಮಾಡಿಕೊಳ್ಳಬಹುದು. ವಿಚಾದಲ್ಲಿ ನಿಮಗೆ ತಾಳ್ಮೆ ಕಡಿಮೆ ಎನಿಸಬಹುದು.
ವೃಷಭ ರಾಶಿ: ವಿಶ್ವಸ್ಥರ ಮೇಲಿನ ನಂಬಿಕೆ ದ್ವಂದ್ವದ ನಡುವೆ ಸಿಲಿಕುವುದು. ವ್ಯಾಪಾರವು ಗಳಿಕೆಯ ಕಡೆ ಮುಖ ಮಾಡಬಹುದು. ಇಂದು ನೀವು ಮತ್ತು ನಿಮ್ಮ ಸಂಗಾತಿಯು ಉತ್ತಮ ಆರೋಗ್ಯವನ್ನು ಹೊಂದಿರುತ್ತೀರಿ. ನಿಮ್ಮ ಮನಸ್ಸಿಗೆ ತೃಪ್ತಿ ಇರುತ್ತದೆ. ನಿಮ್ಮ ಬಂಧುಗಳ ನಡುವೆ ವಿವಾಹ ಸಂಬಂಧವು ಆಗಲಿದೆ. ಎಲ್ಲವೂ ವಿಧಿಯಂತೆ ಆಗುತ್ತದೆ ಎಂಬ ಸತ್ಯವನ್ನು ನೀವು ಅರಿತರೂ ದುಃಖಿಸುವಿರಿ. ಕಛೇರಿಯಲ್ಲಿ ನಿಮ್ಮನ್ನು ನೋಡುವ ದೃಷ್ಟಿಯು ಬದಲಾಗುವುದು. ಎಲ್ಲವನ್ನೂ ಹಣದಿಂದ ಲೆಕ್ಕಹಾಕಲಾಗದು. ದೀರ್ಘಕಾಲದ ಕಾರ್ಯವು ಕೊನೆಗಾಣದೇ ಬೇಸರವಾಗುವುದು. ಆಸ್ತಿಯ ವಿಚಾರದಲ್ಲಿ ನಿಮಗೆ ಅಪಕ್ವತೆಯು ಕಾಣುತ್ತದೆ. ಸುಲಭ ಸಂಗತಿಯನ್ನು ನೀವು ಕ್ಲಿಷ್ಟ ಮಾಡಿಕೊಳ್ಳುವಿರಿ. ಹಣವನ್ನು ಕೊಡಲು ಯಾರಾದರೂ ಪೀಡಿಸಬಹುದು. ಮಕ್ಕಳಿಗೆ ಜೀವನಕ್ಕೆ ಬೇಕಾದ ಧೈರ್ಯವನ್ನು ಹೇಳುವಿರಿ. ನೂತನ ಗೃಹನಿರ್ಮಾಣಕ್ಕೆ ಸಂಗಾತಿಯಿಂದ ಸಹಾಯ. ನಿಮ್ಮನ್ನು ಸಂತೋಷಪಡಿಸಲು ನಿಮ್ಮನ್ನು ಹೊಗಳುವರು. ಪುಣ್ಯಸ್ಥಳಕ್ಕೆ ಹೋಗಲು ಇಚ್ಛಿಸುವಿರಿ. ನಿಮ್ಮ ಸರ್ಕಾರಿ ಉದ್ಯೋಗದ ದಾರಿಯನ್ನು ಸುಗಮ ಮಾಡಿಕೊಳ್ಳಲು ಪ್ರಯತ್ನ.
ಮಿಥುನ ರಾಶಿ: ವ್ಯಾಪಾರದಿಂದ ಸಂಗಾತಿಯ ನಡುವೆ ಮನಸ್ತಾಪ. ಇಂದಿನ ವ್ಯವಹಾರವು ಲಾಭದಾಯಕವಾಗಿ ಮಾಡುವ ಪ್ರಯತ್ನವಿರುವುದು. ಆರ್ಥಿಕತೆಯ ಬಗ್ಗೆ ಕೆಲಸ ಮಾಡುವವರಿಗೆ ಇದು ಬಿಡುವಿಲ್ಲದ ದಿನವಾಗಬಹುದು. ಕೆಲಸದ ನಿಮಿತ್ತ ನೀವು ಇಂದು ಪ್ರಯಾಣ ಮಾಡಬೇಕಾಗಬಹುದು. ಬೇಡವೆಂದರೂ ನಕಾರಾತ್ಮಕ ಚಿಂತನೆಗಳೇ ನಿಮ್ಮ ಮನಸ್ಸಿಗೆ ಬರುವುದು. ಒಂದೇ ತಕ್ಕಡಿಯಲ್ಲಿ ಎಲ್ಲರನ್ನೂ ತೂಗಲಾಗದು. ನಿಮಗೆ ಬರುವ ವಿವಾಹ ಸಂಬಂಧವನ್ನು ಬೇರೆ ಬೇರೆ ಕಾರಣಗಳನ್ನು ಕೊಟ್ಟು ನಿರಾಕರಿಸುವಿರಿ. ನಿಮ್ಮ ಪ್ರಗತಿಯ ಮಾರ್ಗಗಳನ್ನು ತೆರೆಯಬಹುದು. ನೀವು ಉತ್ತಮ ವ್ಯವಹಾರದಿಂದ ಯಶಸ್ವಿಯಾಗುವಿರಿ. ನಿಮ್ಮ ಪೋಷಕರು ಮತ್ತು ಒಡಹುಟ್ಟಿದವರಿಂದ ನೀವು ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಕಲಹರಣಕ್ಕೆ ಯಾರ ಜೊತೆಗಾದರೂ ಮಾತನಾಡುತ್ತಾ ಇರುವಿರಿ. ಸಮಯೋಚಿತ ಸ್ಪಂದನೆಯಿಂದ ಗೌರವ ಸಿಗುವುದು. ಸ್ನೇಹಿತರ ಮೇಲೆ ಸಂದೇಹ ಉಂಟಾಗಬಹುದು. ಹಣಕಾಸಿನ ವಿಚಾರವನ್ನು ಯಾರ ಬಳಿಯೂ ಹೇಳುವುದಿಲ್ಲ.
ಕರ್ಕಾಟಕ ರಾಶಿ: ಯಾವ ನಿರ್ಧಾರವನ್ನೂ ಪೂರ್ಣ ವಿಚಾರ ತಿಳಿಯದೇ ಮಾಡುವುದು ಅಸ್ವಾಭಾವಿಕ. ಇಂದು ನಿಮ್ಮ ಮನಸ್ಸಿನಲ್ಲಿ ಉದ್ಯೋಗಕ್ಕೆ ಸಂಬಂಧಿಸಿದ ಏನಾದರೂ ಗೊಂದಲವಿರಬಹುದು. ಯಾವುದೋ ಅವಘಡದ ಸೂಚನೆಯಿಂದ ನೀವು ಹೆದರುವಿರಿ. ಇದು ನಿಮ್ಮ ಮಾನಸಿಕ ಒತ್ತಡವನ್ನು ಹೆಚ್ಚುಮಾಡೀತು. ನಿಮ್ಮ ವೈವಾಹಿಕ ಸಂಬಂಧಕ್ಕೆ ಸಂಬಂಧಿಸಿದಂತೆ, ನಿಮ್ಮ ಸಂಗಾತಿಯ ನಿಮ್ಮ ಪ್ರೀತಿ ಮತ್ತು ಸಾಮರಸ್ಯ ಉಳಿಯುತ್ತದೆ. ನೀವು ಧರ್ಮ ಕರ್ಮದ ಕೆಲಸಗಳಲ್ಲಿ ಆಸಕ್ತಿ ತೋರಿಸುವಿರಿ. ಅನಾಥ ಭಯವನ್ನು ನೀವು ದೂರಮಾಡಿಕೊಳ್ಳುವಿರಿ. ಆರ್ಥಿಕವಾಗಿ ವಂಚನೆಗೆ ಸಿಲುಕಿದ್ದು ಎಷ್ಟೋ ದಿನದ ಮೇಲೆ ಗೊತ್ತಾಗುವುದು. ಪರರ ಜೊತೆಗಿನ ಹೊಂದಾಣಿಕೆ ಸುಲಭವಾಗಿ ಆಗದು. ಎಂದೋ ನಿರೀಕ್ಷಿಸಿದ್ದ ಬಡ್ತಿಯು ಇಂದು ಸಿಗುವುದು. ಸರ್ಕಾರದ ಹಣ ಗೊತ್ತಾಗದೇ ಮಧ್ಯದಲ್ಲಿ ಸ್ಥಗಿತವಾಗುವುದು. ಮನೆಯ ಹಿರಿಯರಿಂದ ಆಶೀರ್ವಾದ ಬಲಬಂದಂತೆ ಅನ್ನಿಸಬಹುದು. ಹತ್ತಾರು ವಿಚಾರಗಳನ್ನು ನೀವು ಏಕಕಾಲದಲ್ಲಿ ಚಿಂತಿಸಿ ತಲೆಯನ್ನು ಹಾಳು ಮಾಡಿಕೊಳ್ಳುವಿರಿ.
ಸಿಂಹ ರಾಶಿ: ನಿಮ್ಮ ಗೌರವವನ್ನು ಹೆಚ್ಚಿಸಿಕೊಳ್ಳಲು ಸುಳ್ಳಾಡುವಿರಿ. ಇಂದು ಆರೋಗ್ಯ ವಿಚಾರದಲ್ಲಿ ಅಪಾಯ ಕಾಣಿಸುವುದು ಅಜಾಗರೂಕತೆಯದೂರವಿರಬೇಕು. ವ್ಯವಹಾರದಲ್ಲಿ ನೀವು ಸ್ಪರ್ಧಿಗಳ ಬಗ್ಗೆ ತಿಳಿಯಿರಿ. ಅದಕ್ಕೆ ಪ್ರತಿಸ್ಪರ್ಧಿ ತಂತ್ರವನ್ನು ಹೂಡುವಿರಿ. ನಿಮ್ಮನ್ನು ನಿಂದಿಸುವವರ ವಿರುದ್ಧ ಅತಿಯಾದ ಕೋಪ ಮಾಡಿಕೊಳ್ಳುವಿರಿ. ಶತ್ರುಗಳೂ ನಿಮಗೆ ಪರೋಕ್ಷವಾಗಿ ಉಪದೇಶ ಕೊಡಬಹುದು. ಮಕ್ಕಳಿಗಾಗಿ ನಿಮ್ಮನ್ನು ಬದಲಾವಣೆ ಮಾಡಿಕೊಳ್ಳುವಿರಿ. ಹಣಕಾಸಿನ ವಿಷಯಗಳಲ್ಲಿ, ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಆದಾಯವನ್ನು ಹೆಚ್ಚಿಸಿಕೊಳ್ಳುವಿರಿ. ಪ್ರೇಮ ಜೀವನದ ಸಂದರ್ಭದಲ್ಲಿ, ದಿನವು ಸಾಮಾನ್ಯವಾಗಿರುತ್ತದೆ. ಸಹೋದರರ ನಡುವೆ ಪ್ರೀತಿ ಇರುತ್ತದೆ. ಉದ್ಯೋಗದಲ್ಲಿ ನಿಮ್ಮ ಬದಲಾವಣೆ ಆಗಲಿದ್ದು ಆಶ್ಚರ್ಯದ ಸಂಗತಿಯಾದೀತು. ಆರ್ಥಿಕ ವಿಚಾರಕ್ಕೆ ದಾಂಪತ್ಯದಲ್ಲಿ ಕೋಲಾಹಲವಾಗುವುದು. ಆದಾಯಕ್ಕಾಗಿ ಅನ್ಯ ಮಾರ್ಗವನ್ನೂ ನೀವು ಅವಲಂಬಿಸಬಹುದು.
ಕನ್ಯಾ ರಾಶಿ: ನಿಮ್ಮ ಪ್ರಭಾವವು ಇಂದು ಹೆಚ್ಚು ಮಾಡಿಕೊಳ್ಳುವಿರಿ. ಸ್ತ್ರೀಯರು ಸಾಹಸಕ್ಕೆ ಕೈಹಾಕುವರು. ನಿಮ್ಮ ಜಮೀನು ಅಥವಾ ಅದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾಯಾಲಯದಲ್ಲಿ ಜಯ ಸಾಧಿಸಬಹುದು. ನಿಮಗೆ ಬಂಧುಗಳ ಬೆಂಬಲವು ಯೋಜಿತ ಕಾರ್ಯಕ್ಕೆ ಸಿಗಲಿದೆ. ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿನ್ನಡೆಯನ್ನು ಕಂಡು ನಿಮಗೆ ಕಷ್ಟವಾದೀತು. ತಾಯಿಯ ಪ್ರೀತಿಯು ಇಂದು ನಿಮಗೆ ಹೆಚ್ಚು ಸಿಗಲಿದೆ. ಉದ್ಯಮಕ್ಕೆ ವಿದೇಶೀ ಸಂಪರ್ಕ ಸಾಧ್ಯತೆ. ನಿಮ್ಮ ಮನಸ್ತಾಪವನ್ನು ಕೋಪದ ಮೂಲಕ ಹೊರಹಾಕುವಿರಿ. ನಿಮ್ಮ ನಡವಳಿಕೆಯ ಬಗ್ಗೆ ಹಿರಿಯರು ಮಾತನಾಡಿಕೊಳ್ಳುವರು. ನೀವು ಹಣಕಾಸಿನ ವಿಷಯದಲ್ಲಿ ಲಾಭವನ್ನು ಪಡೆಯುತ್ತೀರಿ. ನಿಮ್ಮ ಇಂದಿನ ಗಳಿಕೆಯಿಂದ ಸಂತೋಷವಾಗುತ್ತದೆ. ಸಂಶೋಧನಾ ಶೀಲರಿಗೆ ತಾಳ್ಮೆ ಕಡಿಮೆಯಾಗುವುದು. ಕೀರ್ತಿಯ ಆಸೆಯಿಂದ ಸುಳ್ಳು ಹೇಳುವರು. ನೀವು ತಾಳ್ಮೆಯಿಂದಿರಿ ಮತ್ತು ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳಿ. ಮನೆಯಲ್ಲಿ ನೆಮ್ಮದಿಯ ವಾತಾವರಣವು ಹಾಳಾಗಬಹುದು. ಕಲಿಕೆಯ ವಿಚಾರದಲ್ಲಿ ನೀವು ಹಿಂದುಳಿಯುವಿರಿ. ಪ್ರೀತಿಯ ಕಾರಣದಿಂದ ನಿಮಗೆ ದುಃಖ.