ಕಾವೇರಿ ಕಿಚ್ಚು; ತಮಿಳುನಾಡಿನಲ್ಲಿ ಸಿದ್ದರಾಮಯ್ಯಗೆ ಶ್ರದ್ದಾಂಜಲಿ, ರಾಮನಗರದಲ್ಲಿ ಸ್ಟಾಲಿನ್ಗೆ ತಿಥಿ
ತಮಿಳುನಾಡಿನಲ್ಲೂ ಕಾವೇರಿ ನೀರಿಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳುನಾಡಿನ ತಿರುಚ್ಚಿನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ ವಿರುದ್ಧ ತಮಿಳಿಗರು ಆಕ್ರೋಶ ಹೊರ ಹಾಕಿದ್ದು ಕರ್ನಾಟಕದ ರಾಮನಗರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ಗೆ ತಿಥಿ ಮಾಡಲಾಗಿದೆ. ತಿರುಚನಾಪಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವ ಚಿತ್ರಕ್ಕೆ ಹೂ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದೆ (Cauvery Water Dispute). ತಮಿಳುನಾಡಿಗೆ ಕರ್ನಾಟಕ ಕಾವೇರಿ ನೀರು ಹರಿಸುತ್ತಿರುವುದನ್ನು ಖಂಡಿಸಿ ಬೆಂಗಳೂರು ಬಂದ್ (Bengaluru Bandh) ಮಾಡಿ ರಾಜ್ಯದೆಲ್ಲೆಡೆ ರೈತರು, ಹಲವು ಸಂಘಟನೆಗಳು ಆಕ್ರೋಶ ಹೊರ ಹಾಕುತ್ತಿವೆ. ಇದರ ನಡುವೆ ತಮಿಳುನಾಡಿನಲ್ಲೂ ಕಾವೇರಿ ನೀರಿಗಾಗಿ ಪ್ರತಿಭಟನೆಗಳು ನಡೆಯುತ್ತಿವೆ. ತಮಿಳುನಾಡಿನ ತಿರುಚ್ಚಿನಲ್ಲಿ ಕರ್ನಾಟಕ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ತಮಿಳಿಗರು ಆಕ್ರೋಶ ಹೊರ ಹಾಕಿದ್ದು ಕರ್ನಾಟಕದ ರಾಮನಗರದಲ್ಲಿ ತಮಿಳುನಾಡು ಸಿಎಂ ಸ್ಟಾಲಿನ್ಗೆ (MK Stalin) ತಿಥಿ ಮಾಡಲಾಗಿದೆ.
ತಿರುಚನಾಪಳ್ಳಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾವ ಚಿತ್ರಕ್ಕೆ ಹೂ ಹಾರ ಹಾಕಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕರ್ನಾಟಕದಿಂದ ತಮಿಳುನಾಡಿಗೆ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಅಯ್ಯಯ್ಯೋ ಅನ್ಯಾಯ ಎಂದು ಘೋಷಣೆ ಕೂಗಿ ಕರ್ನಾಟಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕೂಡಲೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿದ್ದಾರೆ. ಮತ್ತೊಂದೆಡೆ ರಾಮನಗರದ ಐಜೂರು ಸರ್ಕಲ್ ಬಳಿ ತಮಿಳುನಾಡು ಸಿಎಂ ಸ್ಟಾಲಿನ್ ವಿರುದ್ಧ ಧರಣಿ ನಡೆಸಲಾಗಿದೆ. ದೇಶದ ಪಾಲಿಗೆ ಸ್ಟಾಲಿನ್ ಸತ್ತೋದ ಎಂದು ಊದಿನ ಕಡ್ಡಿ ಹಚ್ಚಿ, ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಮೌನಾಚರಣೆ ಮಾಡಿ ಸ್ಟಾಲಿನ್ ಮತ್ತೆ ಹುಟ್ಟಿ ಬರಬೇಡ ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಲಾಗಿದೆ. ಕಾವೇರಿ ವಿಚಾರವಾಗಿ ತಮಿಳುನಾಡು ನಡೆದುಕೊಂಡ ರೀತಿಗೆ ಜಯ ಕರ್ನಾಟಕ ಸಂಘಟನೆ ವಿರೋಧ ಹೊರ ಹಾಕಿದೆ.