ಬಂದ್, ಪ್ರತಿಭಟನೆ ನಡೆಸಬಾರದು ಅಂತ ಸರ್ವೋಚ್ಛ ನ್ಯಾಯಾಲಯ ಹೇಳಿದೆ, ಆದರೆ ನಮ್ಮ ಸರ್ಕಾರ ಬಂದ್​ಗಳಿಗೆ ಅಡ್ಡಿಪಡಿಸಿಲ್ಲ: ಸಿದ್ದರಾಮಯ್ಯ, ಸಿಎಂ

ಬಂದ್, ಪ್ರತಿಭಟನೆ ನಡೆಸಬಾರದು ಅಂತ ಸರ್ವೋಚ್ಛ ನ್ಯಾಯಾಲಯ ಹೇಳಿದೆ, ಆದರೆ ನಮ್ಮ ಸರ್ಕಾರ ಬಂದ್​ಗಳಿಗೆ ಅಡ್ಡಿಪಡಿಸಿಲ್ಲ: ಸಿದ್ದರಾಮಯ್ಯ, ಸಿಎಂ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 26, 2023 | 1:06 PM

Bangalore Bandh: ರಾಷ್ಟ್ರದಾದ್ಯಂತ ಬಿಜೆಪಿಯನ್ನು ವಿರೋಧಿಸುವ ಶಕ್ತಿಗಳು ಒಂದುಗೂಡುತ್ತಿವೆ, ಕಳೆದ 9 ವರ್ಷಗಳಲ್ಲಿ ಬಿಜೆಪಿ ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದು ಗೊತ್ತಾಗಿ ಬಿಜೆಪಿಯೇತರ ಸಂಘಟನೆ ಸೇರಲು ಮುಂದಾಗುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಮೈಸೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಶುಕ್ರವಾರದಂದು ಕನ್ನಡ-ಪರ ಸಂಘಟನೆಗಳು (Pro-Kannada organisations) ನೀಡಿರುವ ಕರ್ನಾಟಕ ಬಂದ್ ಕರೆಗೆ (Karnataka Bandh) ಪ್ರತಿಕ್ರಿಯೆ ನೀಡಿದರು. ಬಂದ್ ಮಾಡಬಾರದು, ಹರತಾಳ-ಮೆರವಣಿಗೆ ನಡೆಸಬಾರದು ಅಂತ ಸುಪ್ರೀಮ್ ಕೋರ್ಟ್ ಹೇಳಿದೆ, ಹಾಗಂತ ರೈತ ಸಂಘಟನೆಗಳು ಇಂದು ಕರೆ ನೀಡಿರುವ ಬೆಂಗಳೂರು ಬಂದ್ ಗೆ ಅಥವಾ ಸೆಪ್ಟೆಂಬರ್ 29ರ ಪ್ರಸ್ತಾಪಿತ ಕರ್ನಾಟಕ ಬಂದ್ ಗೆ ತಮ್ಮ ಸರ್ಕಾರ ಅಡ್ಡಿಪಡಿಸಿಲ್ಲ ಎಂದು ಹೇಳಿದರು. ತಮಿಳುನಾಡಿನ ಎಐಎಡಿಎಂಕೆ ಪಕ್ಷವು ಎನ್ ಡಿ ಎ ಒಕ್ಕೂಟದಿಂದ ಹೊರಬಂದಿದೆ ಮತ್ತು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯ ಬಳಿಕ ಹಲವಾರು ಮುಸ್ಲಿಂ ನಾಯಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ, ಬಿಜೆಪಿ ವಿರುದ್ಧ ಧ್ರುವೀಕರಣ ನಡೆಯುತ್ತಿದೆಯಾ ಅಂತ ಕೇಳಿದ ಪ್ರಶ್ನೆಗೆ ಸಿದ್ದರಾಮಯ್ಯ, ರಾಷ್ಟ್ರದಾದ್ಯಂತ ಬಿಜೆಪಿಯನ್ನು ವಿರೋಧಿಸುವ ಶಕ್ತಿಗಳು ಒಂದುಗೂಡುತ್ತಿವೆ, ಕಳೆದ 9 ವರ್ಷಗಳಲ್ಲಿ ಬಿಜೆಪಿ ಭಾವನಾತ್ಮಕ ಅಂಶಗಳನ್ನು ಮುಂದಿಟ್ಟುಕೊಂಡು ಸಮಾಜವನ್ನು ಒಡೆಯುವ ಕೆಲಸ ಮಾಡಿದ್ದು ಗೊತ್ತಾಗಿ ಬಿಜೆಪಿಯೇತರ ಸಂಘಟನೆ ಸೇರಲು ಮುಂದಾಗುತ್ತಿದ್ದಾರೆ ಎಂದು ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ