ಆನೇಕಲ್: ಚಿನ್ನಾಭರಣಗಳ ಅಂಗಡಿಯಿಂದ ಕಳ್ಳತನ ಮಾಡುವ ದೃಶ್ಯ ಕೆಮೆರಾದಲ್ಲಿ ಸೆರೆ!
ಸಾಮಾನ್ಯವಾಗಿ ಎಲ್ಲ ಅಂಗಡಿಗಳಲ್ಲಿ ಅದರಲ್ಲೂ ವಿಶೇಷವಾಗಿ ಚಿನ್ನಾಭರಣಗಳ ಅಂಗಡಿಯಲ್ಲಿ ಸಿಸಿಟಿವಿ ಕೆಮೆರಾಗಳನ್ನು ಅಳವಡಿಸಿರುತ್ತಾರೆ ಮತ್ತು ಅದು ಕಳ್ಳರಿಗೆ ಗೊತ್ತಿರುತ್ತದೆ. ಫುಟೇಜ್ ಆಧರಿಸಿ ತಮ್ಮ ಹಿಡಿಯುವುದು ಪೊಲೀಸರಿಗೆ ಸುಲಭ ಅಂತ ಅವರಿಗೆ ಗೊತ್ತಿರಲ್ಲವೇ? ಆದರೆ ಸಿಸಿಟಿವಿ ಕೆಮೆರಾ ಅವರನ್ನು ಕಳ್ಳತನಕ್ಕೆ ಮುಂದಾಗದಂತೆ ತಡೆಯುತ್ತಿಲ್ಲ.
ಆನೇಕಲ್ (ಬೆಂಗಳೂರು): ಮೊದಲಿನ ಹಾಗೆ ಕಳ್ಳರು ಈಗ ವೇಷ ಮರೆಸಿಕೊಂಡು ಬರೋದಿಲ್ಲ. ಒಡವೆ ಅಂಗಡಿಗಳಿಗೆ ಬರುವವರು ಗ್ರಾಹಕರಂತೆ ಬಂದು ದೋಚುತ್ತಾರೆ. ಆನೇಕಲ್ ಪಟ್ಟಣದ ರಾಜಾರಾಮ್ ಲಕ್ಷ್ಮೀ ಅರ್ಟ್ ಜ್ಯೂಯೆಲ್ಲರ್ಸ್ ಅಂಗಡಿಗೆ ಬಂದಿರುವ ಈ ಖದೀಮನನ್ನು ನೋಡಿ. ಉಂಗುರ ತೋರಿಸುವಂತೆ ಅಂಗಡಿಯವನಿಗೆ ಹೇಳುತ್ತಾನೆ. ಒಳಗಿನಿಂದ ಉಂಗರುಗಳ ಕೇಸನ್ನು ಅಂಗಡಿಯವನು ತರುವಷ್ಟರಲ್ಲಿ ಶೋಕೇಸ್ ನಲ್ಲಿದ್ದ 396 ಗ್ರಾಂ ತೂಕದ ಚಿನ್ನಾಭರಣ ಕದ್ದು ಅಲ್ಲಿಂದ ಪರಾರಿಯಾಗುತ್ತಾನೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹಾಡಹಗಲೇ ಮೆಡಿಕಲ್ ಶಾಪ್ಗೆ ನುಗ್ಗಿ ದರೋಡೆ ಮಾಡಿದ ಕಳ್ಳರು; ಶಾಕಿಂಗ್ ವಿಡಿಯೋ ವೈರಲ್
Latest Videos