Loading video

ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು, ವಿಡಿಯೋ ನೋಡಿ

|

Updated on: Apr 02, 2025 | 9:41 PM

ನ್ಯಾಯಾಧೀಶರ ಮನೆಯಲ್ಲಿ 7 ಲಕ್ಷ ರೂ.ಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೀದರ್ (Bidar) ನಗರದ ಜನವಾಡ ರಸ್ತೆಯಲ್ಲಿರುವ ನ್ಯಾಯಾಧೀಶರ ವಸತಿ ಗೃಹದಲ್ಲಿ ನಡೆದಿದೆ. ಕುಟುಂಬದ ಸದಸ್ಯರೆಲ್ಲರು ಸೇರಿ ಕೊಪ್ಪಳಕ್ಕೆ ಹೋಗಿದ್ದಾಗ ಬರೋಬ್ಬರಿ 7,61,800 ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದಾರೆ. ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೀದರ್,( ಏಪ್ರಿಲ್ 02): ನ್ಯಾಯಾಧೀಶರ ಮನೆಯಲ್ಲಿ 7 ಲಕ್ಷ ರೂ.ಗಿಂತಲೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಘಟನೆ ಬೀದರ್ (Bidar) ನಗರದ ಜನವಾಡ ರಸ್ತೆಯಲ್ಲಿರುವ (Janawad Road) ನ್ಯಾಯಾಧೀಶರ ವಸತಿ ಗೃಹದಲ್ಲಿ ನಡೆದಿದೆ. ಬೀದರ್‌ನ 2ನೇ ಹೆಚ್ಚುವರಿ ಸಿವಿಲ್ ಮತ್ತು 2ನೇ ಜೆಎಂಎಫ್‌ಸಿ (JMFC) ನ್ಯಾಯಾಧೀಶರಾದ ಎಂ.ಡಿ.ಶೇಜ್ ಚೌಟಾಯಿ ವಸತಿ ಗೃಹದಲ್ಲಿ ಕಳ್ಳತನವಾಗಿದೆ. ಕುಟುಂಬದ ಸದಸ್ಯರೆಲ್ಲರು ಸೇರಿ ಕೊಪ್ಪಳಕ್ಕೆ ಹೋಗಿದ್ದಾಗ ಬರೋಬ್ಬರಿ 7,61,800 ರೂ. ಮೌಲ್ಯದ ಚಿನ್ನಾಭರಣವನ್ನು ಕದ್ದು, ಪರಾರಿಯಾಗಿದ್ದಾರೆ. ನ್ಯಾಯಾಧೀಶರ ಮನೆಯಲ್ಲಿ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನ್ಯಾಯಾಧೀಶರು ಈ ಕುರಿತು ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.