ಹುಬ್ಬಳ್ಳಿಯಲ್ಲಿ ಗುತ್ತಿಗೆದಾರನ ಕಿಡ್ನ್ಯಾಪ್: ಸಿಸಿ ಕ್ಯಾಮರಾದಲ್ಲಿ ಘಟನೆ ಸೆರೆ
ಹುಬ್ಬಳ್ಳಿ ನಗರದ ತೋಳನಕೆರೆ ಸಮೀಪ ನಡೆದಿದ್ದ ಗುತ್ತಿಗೆದಾರ ಮೋಹನ್ ಚೌಹಾಣ್ ಅಪಹರಣ ಕೇಸ್ ಸಂಬಂಧ ಅಪಹರಣಕಾರರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಿನ್ನೆ ಮಧ್ಯಾಹ್ನ 12.30ರ ಸುಮಾರಿಗೆ ಘಟನೆ ನಡೆದಿದ್ದು, ಅದರ ದೃಶ್ಯಾವಳಿಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಿಡಿಯೋ ಗಮನಿಸಿದರೆ ಒಂದೊಂದು ದೃಶ್ಯವೂ ಬೆಚ್ಚಿಬೀಳಿಸುವಂತಿದೆ.
ಹುಬ್ಬಳ್ಳಿ, ಅಕ್ಟೋಬರ್ 09: ಗುತ್ತಿಗೆದಾರ ಮೋಹನ್ ಚೌಹಾಣ್ ಕಿಡ್ನ್ಯಾಪ್ ಕೇಸ್ ಸಂಬಂಧ ಅಪಹರಣಕಾರರನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ನಿವಾಸಿಯಾಗಿರುವ ಬಸಪ್ಪ ದಳವಾಯಿ ಮತ್ತು ಸಹಚರರನ್ನು ಬಂಧಿಸಲಾಗಿದೆ. ಆ ಬೆನ್ನಲ್ಲೇ ಸಿನಿಮಾ ರೀತಿಯಲ್ಲಿ ನಡೆದಿದ್ದ ಕಿಡ್ನ್ಯಾಪ್ನ ಸಿಸಿ ಕ್ಯಾಮರಾ ದೃಶ್ಯಗಳು ವೈರಲ್ ಆಗಿವೆ. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಪಹರಣ ಮಾಡಿದ್ದರು ಎಂಬುದು ಗೊತ್ತಾಗಿದ್ದು, ಸಿಸಿ ಕ್ಯಾಮರಾ ದೃಶ್ಯಗಳು ಬೆಚ್ಚಬೀಳಿಸುವಂತಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
