ಭೂಪಾಲ್ನಲ್ಲಿ ಪಿಎಂ ಶ್ರೀ ಶಾಲೆಯಲ್ಲಿ ಸೀಲಿಂಗ್ ಪ್ಲಾಸ್ಟರ್ ಬಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯ
ಮಧ್ಯಪ್ರದೇಶದ ಭೂಪಾಲ್‌ನ ಪಿಎಂ ಶ್ರೀ ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು ತಪ್ಪಿದೆ. ತರಗತಿಯ ಒಳಭಾಗದ ಸೀಲಿಂಗ್‌ನ ಪ್ಲಾಸ್ಟರ್ ಬಿದ್ದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಅಪಘಾತದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸ್ಥಳದಲ್ಲಿದ್ದರು. ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ.
ಭೂಪಾಲ್, ಜುಲೈ 19: ಮಧ್ಯಪ್ರದೇಶದ ರಾಜಧಾನಿ ಭೂಪಾಲ್‌ನ (Bhopal) ಬರ್ಖೇಡಾ ಪಠಾಣಿಯಲ್ಲಿರುವ ಸರ್ಕಾರಿ ಪಿಎಂ ಶ್ರೀ ಶಾಲೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅಪಘಾತವೊಂದು (Accident) ತಪ್ಪಿದೆ. ಶಾಲೆಯ ತರಗತಿಯೊಂದರ ಸೀಲಿಂಗ್‌ನ ಪ್ಲಾಸ್ಟರ್ ಇದ್ದಕ್ಕಿದ್ದಂತೆ ವಿದ್ಯಾರ್ಥಿಗಳ ಮೇಲೆ ಬಿದ್ದು, ಇಬ್ಬರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ಈ ಅಪಘಾತ ಸಂಭವಿಸಿದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ತರಗತಿಯಲ್ಲಿದ್ದರು. ಒಬ್ಬ ಶಿಕ್ಷಕಿ ಕೂಡ ಪಾಠ ಮಾಡುತ್ತಿದ್ದರು. ಅದೃಷ್ಟವಶಾತ್ ಎಲ್ಲರೂ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಇನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ