Pralhad Joshi Oath: ದೇವರ ಹೆಸರಲ್ಲಿ ಪ್ರಮಾಣವಚನ ಸ್ವೀಕರಿಸಿದ ಪ್ರಲ್ಹಾದ್ ಜೋಶಿ
ದೇವರ ಹೆಸರಿನಲ್ಲಿ ಪ್ರಲ್ಹಾದ್ ಜೋಶಿ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಅತ್ತ ಪ್ರಲ್ಹಾದ್ ಜೋಶಿ ಪ್ರಮಾಣ ಸ್ವೀಕರಿಸುತ್ತಿದಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ದುರ್ಗದ ಬೈಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೇಶಕ್ಕೆ ಮೋದಿಜೀ, ಧಾರವಾಡಕ್ಕೆ ಜೋಶಿಜೀ ಎಂದು ಜೈಕಾರ ಹಾಕಿದ್ದಾರೆ.
ದೆಹಲಿ, ಜೂನ್ 09: ಭಾರತದ 15 ನೇ ಪ್ರಧಾನಿಯಾಗಿ ನರೇಂದ್ರ ದಾಮೋದರ್ ದಾಸ್ ಮೋದಿ (Narendra Modi) ಪದಗ್ರಹಣ ಮಾಡಿದ್ದಾರೆ. ಸಂಜೆ 7ಗಂಟೆ 15 ನಿಮಿಷಕ್ಕೆ ವಿಶ್ವದ ಚಿತ್ತದ ಭಾರತದತ್ತ ನೆಟ್ಟಿತ್ತು. ದೇಶದ ಜನರ ಕಣ್ಣು ರಾಷ್ಟ್ರಪತಿ ಭವನದತ್ತ ಬಿದ್ದಿತ್ತು. ಈಶ್ವರನ ಹೆಸರಿನಲ್ಲಿ ಮೂರನೇ ಬಾರಿಗೆ ಮೋದಿ ಪ್ರಧಾನಿ ಪ್ರಮಾಣ ವಚನ ಸ್ವೀಕರಿಸುವುದನ್ನು ಕೋಟ್ಯಾಂತರ ಜನರು ಕಣ್ತುಂಬಿಕೊಂಡಿದ್ದಾರೆ. ಅದೇ ರೀತಿಯಾಗಿ ದೇವರ ಹೆಸರಿನಲ್ಲಿ ಪ್ರಲ್ಹಾದ್ ಜೋಶಿ (Pralhad Joshi) ಕೇಂದ್ರ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಿದ್ದಾರೆ. ಅತ್ತ ಪ್ರಲ್ಹಾದ್ ಜೋಶಿ ಪ್ರಮಾಣ ಸ್ವೀಕರಿಸುತ್ತಿದಂತೆ ಹುಬ್ಬಳ್ಳಿಯಲ್ಲಿ ಬಿಜೆಪಿ ವತಿಯಿಂದ ದುರ್ಗದ ಬೈಲ್ನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ದೇಶಕ್ಕೆ ಮೋದಿಜೀ, ಧಾರವಾಡಕ್ಕೆ ಜೋಶಿಜೀ ಎಂದು ಜೈಕಾರ ಹಾಕಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.