ಆನೇಕಲ್ ನಲ್ಲಿ ಪುನಃ ಶುರವಾದ ಸರಗಳ್ಳತನ, ಇರಾನಿ ಗ್ಯಾಂಗ್ ಸಕ್ರಿಯಗೊಂಡಿರುವ ಬಗ್ಗೆ ಶಂಕೆ

|

Updated on: Jan 23, 2024 | 5:28 PM

ಅಮಾಯಕ ಮಹಿಳೆಗೆ ದುಷ್ಟರ ಉದ್ದೇಶ ಗೊತ್ತಾಗಲ್ಲ. ಹಾಗೆ ಮಾತಾಡುತ್ತಲೇ ಬೈಕ್ ಮೇಲಿನ ಪಿಲಿಯನ್ ರೈಡರ್ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಎಳೆಯುತ್ತಿದ್ದಂತೆಯೇ ಬೈಕ್ ಓಡಿಸುತ್ತಿದ್ದವ ವಾಹನನವನ್ನು ಭುರ್ ಅನಿಸುತ್ತಾ ಶರವೇಗದಲ್ಲಿ ಓಡಿಸುತ್ತಾನೆ. ಮಹಿಳೆ ಹ್ಯಾಪುಮೋರೆ ಹಾಕಿಕೊಂಡು ಮನೆಯೊಳಗೆ ಹೋಗುತ್ತಾರೆ.

ಬೆಂಗಳೂರು: ನೀವು ಮಹಿಳೆಯಾಗಿದ್ದು ಆನೇಕಲ್ (Anekal), ಅತ್ತಿಬೆಲೆ, ಸೂರ್ಯನಗರ ಅಥವ ಜಿಗಣಿ ಮೊದಲಾದ ಸ್ಥಳಗಳ ರಸ್ತೆಗಳಲ್ಲಿ ಓಡಾಡುತ್ತಿದ್ದರೆ ಸ್ವಲ್ಪ ಎಚ್ಚರವಹಿಸುವ ಅವಶ್ಯಕತೆಯಿದೆ. ಈ ವಿಡಿಯೋ ನೋಡಿದರೆ ಯಾಕೆ ಅಂತ ಅರ್ಥವಾಗುತ್ತದೆ. ಈ ಪ್ರದೇಶಗಳಲ್ಲಿ ಬಹಳ ಸಮಯದ ನಂತರ ಸರಗಳ್ಳತನ (chain snatchers) ಮಾಡುವ ಇರಾನಿ ಗ್ಯಾಂಗ್ (Irani gang) ಪುನಃ ಸಕ್ರಿಯವಾದಂತಿದೆ. ಆನೇಕಲ್ ಮತ್ತು ಅತ್ತಿಬೆಲೆಯ ಸಿಸಿಟಿವಿ ಗಳಲ್ಲಿ ಸೆರೆಯಾಗಿರುವ ದೃಶ್ಯಗಳನ್ನು ಗಮನಿಸಿ. ಮೊದಲ ದೃಶ್ಯದಲ್ಲಿ, ಪಲ್ಸರ್ ಬೈಕ್ ಮೇಲೆ ಬರುವ ಇಬ್ಬರು ಸರಗಳ್ಳರು ಮನೆಯೊಳಗೆ ಹೋಗುತ್ತಿದ್ದ ಒಬ್ಬ ಮಧ್ಯವಯಸ್ಕ ಮಹಿಳೆಯನ್ನು ತಡೆದು ನಿಲ್ಲಿಸಿ ಅಡ್ರೆಸ್ ಕೇಳುವ ನೆಪದಲ್ಲಿ ಅವರ ಸನಿಹಕ್ಕೆ ಬರುತ್ತಾರೆ. ಅಮಾಯಕ ಮಹಿಳೆಗೆ ದುಷ್ಟರ ಉದ್ದೇಶ ಗೊತ್ತಾಗಲ್ಲ. ಹಾಗೆ ಮಾತಾಡುತ್ತಲೇ ಬೈಕ್ ಮೇಲಿನ ಪಿಲಿಯನ್ ರೈಡರ್ ಮಹಿಳೆಯ ಕುತ್ತಿಗೆಗೆ ಕೈಹಾಕಿ ಸರ ಎಳೆಯುತ್ತಿದ್ದಂತೆಯೇ ಬೈಕ್ ಓಡಿಸುತ್ತಿದ್ದವ ವಾಹನನವನ್ನು ಭುರ್ ಅನಿಸುತ್ತಾ ಶರವೇಗದಲ್ಲಿ ಓಡಿಸುತ್ತಾನೆ. ಮಹಿಳೆ ಹ್ಯಾಪುಮೋರೆ ಹಾಕಿಕೊಂಡು ಮನೆಯೊಳಗೆ ಹೋಗುತ್ತಾರೆ.

ಮತ್ತೊಂದು ದೃಶ್ಯ ಸರಿಯಾಗಿ ಸೆರೆಯಾಗಿಲ್ಲ. ಅದರೆ ಈ ಘಟನೆಯಲ್ಲಿ ಸರ ಕಳೆದುಕೊಂಡ ಮಹಿಳೆ ವಿವರಣೆ ನೀಡಿದ್ದಾರೆ. ಸಂಕ್ರಾಂತಿ ಹಬ್ಬದ ಮರುದಿನ ಇವರು ಕಬ್ಬು ಖರೀದಿಸುವಾಗ ಸರಗಳ್ಳರು ಚಿನ್ನದ ಸರ ಎಳೆದೊಯ್ದಿದ್ದಾರೆ. 6 ವರ್ಷಗಳ ಹಿಂದೆ ಹೀಗೆಯೇ ಇವರ ಸರ ಕಳ್ಳತನವಾಗಿತ್ತಂತೆ ಮತ್ತು ಪೊಲೀಸರು ಅದನ್ನು ಪತ್ತೆಮಾಡಿ ವಾಪಸ್ಸು ಕೊಟ್ಟಿದ್ದರಂತೆ. ಮಹಿಳೆಯರಿಗೆ ಸುರಕ್ಷತೆ ಇಲ್ಲ ಎಂದು ಇವರು ನೋವಿನಿಂದ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ