ಶ್ರೀರಾಮನೇನು ಬಿಜೆಪಿ ನಾಯಕರ ಆಸ್ತಿಯೇ? ಬಿಜೆಪಿ ಟೀಕೆಗೆ ತಿರುಗೇಟು ನೀಡಿದ ಡಿಕೆ ಶಿವಕುಮಾರ್
ನಿನ್ನೆ ತಮ್ಮ ಸರ್ಕಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡಿಸಿ ಅನ್ನ ಸಂತಪರ್ಣೆ ಮಾಡಿಸಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ, ಕೈಕೈ ಹೊಸಕಿಕೊಳ್ಳುತ್ತಾ ನಮ್ಮ ಕೈಯಲ್ಲಿ ಅಧಿಕಾರವಿಲ್ಲವಲ್ಲ ಅಂತ ಪರಿತಪಿಸುತ್ತಿದ್ದಾರೆ ಎಂದು ಕುಟುಕಿದರು.
ಬೆಂಗಳೂರು: ನಿನ್ನೆ ಬೆಂಗಳೂರು ಪೂರ್ವ ಭಾಗದಲ್ಲಿ ರಾಮಮಂದಿರವೊಂದನ್ನು ಉದ್ಘಾಟಿಸಿದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಜೈ ಶ್ರೀರಾಮ್ ಅಂತ ಹೇಳಿದ್ದಕ್ಕೆ ಟೀಕಿಸುತ್ತಿರುವ ಬಿಜೆಪಿ ನಾಯಕರಿಗೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಶ್ರೀರಾಮ (Sriram) ಏನು ಅವರ ಮನೆ ಆಸ್ತಿನಾ ಅಂತ ಕೇಳಿದ ಶಿವಕುಮಾರ್, ಸಿದ್ದರಾಮಯ್ಯನವರ ಹೆಸರಲ್ಲಿ ರಾಮ ಇದ್ದಾನೆ ಮತ್ತು ತಮ್ಮ ಹೆಸರಲ್ಲಿ ಶಿವ ಮತ್ತು ಕುಮಾರ ಇಬ್ಬರೂ ಇದ್ದಾರೆ ಎಂದರು. ಗಾಂಧೀಜಿ ಅವರು ಹಾಡಿದ್ದು ಏನು ಅನ್ನೋದು ಅಂತ ಅವರಿಗೆ ಗೊತ್ತಿಲ್ವಾ? ರಘುಪತಿ ರಾಘವ ರಾಜಾರಾಮ ಪತಿತ ಪಾವನ ಸೀತಾರಾಮ ಅಂತ ಹಾಡಿದ ಶಿವಕುಮಾರ್ ನಮಗೆ ರಾಮನೂ ಬೇಕು, ಸೀತೆಯೂ ಬೇಕು ಎಂದರು. ಮಾಡಲು ಕೆಲಸವಿಲ್ಲದೆ ಹತಾಶರಾಗಿರುವ ಬಿಜೆಪಿ ನಾಯಕರಿಗೆ, ನಿನ್ನೆ ತಮ್ಮ ಸರ್ಕಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳಲ್ಲಿ ಪೂಜೆಗಳನ್ನು ಮಾಡಿಸಿ ಅನ್ನ ಸಂತಪರ್ಣೆ ಮಾಡಿಸಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ, ಕೈಕೈ ಹೊಸಕಿಕೊಳ್ಳುತ್ತಾ ನಮ್ಮ ಕೈಯಲ್ಲಿ ಅಧಿಕಾರವಿಲ್ಲವಲ್ಲ ಅಂತ ಪರಿತಪಿಸುತ್ತಿದ್ದಾರೆ ಎಂದು ಕುಟುಕಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ