ಬಿಜೆಪಿ ನಾಯಕರು ನಮ್ಮನ್ನು ಪ್ರಶ್ನಿಸುವ ಬದಲು, ಶಂಕಾರಾಚಾರ್ಯರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಸಚಿವ

ಬಿಜೆಪಿ ನಾಯಕರು ನಮ್ಮನ್ನು ಪ್ರಶ್ನಿಸುವ ಬದಲು, ಶಂಕಾರಾಚಾರ್ಯರು ಕೇಳುತ್ತಿರುವ ಪ್ರಶ್ನೆಗೆ ಉತ್ತರಿಸಲಿ: ಪ್ರಿಯಾಂಕ್ ಖರ್ಗೆ, ಸಚಿವ

ಅರುಣ್​ ಕುಮಾರ್​ ಬೆಳ್ಳಿ
|

Updated on: Jan 23, 2024 | 4:42 PM

ಎಐಸಿಸಿ ಅಧ್ಯಕ್ಷರಾಗಲೀ ಅಥವಾ ರಾಹುಲ್ ಗಾಂದಿಯವರಾಗಲೀ ಯಾವುದೇ ಕಾಂಗ್ರೆಸ್ ಧುರೀಣನನ್ನು ಅಯೋಧ್ಯೆಗೆ ಹೋಗದಂತೆ ತಡೆದಿಲ್ಲ, ಉತ್ತರ ಪ್ರದೇಶದ ಪಿಸಿಸಿ ಪದಾಧಿಕಾರಿಗಳು ಮಂದಿರಕ್ಕೆ ಹೋಗುತ್ತಿದ್ದಾರೆ, ಧರ್ಮ, ದೇವರು, ನಿಷ್ಠೆ-ವೈಯಕ್ತಿಕ ವಿಚಾರಗಳು, ಆಸ್ತಿಕರು ಮಂದಿರಗಳಿಗೆ ಹೋದರೆ ನಾಸ್ತಿಕರು ಹೋಗುವುದಿಲ್ಲ ಎಂದು ಖರ್ಗೆ ಹೇಳಿದರು.

ಬೆಂಗಳೂರು: ರಾಮಮಂದಿರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ (Ram Temple Consecration) ಕಾಂಗ್ರೆಸ್ ನಾಯಕರು ಹೋಗದಿರುವ ಪ್ರಶ್ನೆ ದೊಡ್ಡದಲ್ಲ; ಬಿಜೆಪಿ ನಾಯಕರು (BJP leaders), ಕಾಂಗ್ರೆಸ್ ನಾಯಕರನ್ನು ಪಶ್ನಿಸುವಂತೆಯೂ ಇಲ್ಲ ಎದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು. ನಗರದಲ್ಲಿಂದು ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಸಚಿವರು, ಪ್ರಾಣ ಪ್ರತಿಷ್ಠೆ ಬಗ್ಗೆ ಪ್ರಶ್ನೆ ಎತ್ತಿರೋದು ನಾಲ್ಕು ಶಂಕರಾಚಾರ್ಯರೇ ಹೊರತು ಕಾಂಗ್ರೆಸ್ ನಾಯಕರಲ್ಲ ಎಂದು ಹೇಳಿದರು. ಶಂಕರಾಚಾರ್ಯರು ಕೇಳಿದ ಪ್ರಶ್ನೆಗಳಿಗೆ ಬಿಜೆಪಿ ನಾಯಕರು ಉತ್ತರ ಕೊಡಬೇಕು, ಕಾಂಗ್ರೆಸ್ ನಾಯಕರನ್ನು ಯಾಕೆ ರಾಮಮಂದಿರಕ್ಕೆ ಹೋಗಲಿಲ್ಲ ಅಂತ ಕೇಳೋದರಲ್ಲಿ ಅರ್ಥವಿಲ್ಲ ಎಂದು ಹೇಳಿದ ಅವರು, ಎಐಸಿಸಿ ಅಧ್ಯಕ್ಷರಾಗಲೀ ಅಥವಾ ರಾಹುಲ್ ಗಾಂದಿಯವರಾಗಲೀ ಯಾವುದೇ ಕಾಂಗ್ರೆಸ್ ಧುರೀಣನನ್ನು ಅಯೋಧ್ಯೆಗೆ ಹೋಗದಂತೆ ತಡೆದಿಲ್ಲ, ಉತ್ತರ ಪ್ರದೇಶದ ಪಿಸಿಸಿ ಪದಾಧಿಕಾರಿಗಳು ಮಂದಿರಕ್ಕೆ ಹೋಗುತ್ತಿದ್ದಾರೆ ಎಂದರು. ಧರ್ಮ, ದೇವರು, ನಿಷ್ಠೆ-ವೈಯಕ್ತಿಕ ವಿಚಾರಗಳು, ಆಸ್ತಿಕರು ಮಂದಿರಗಳಿಗೆ ಹೋದರೆ ನಾಸ್ತಿಕರು ಹೋಗುವುದಿಲ್ಲ ಎಂದು ಖರ್ಗೆ ಹೇಳಿದರು. ತಾನು ವೈಯಕ್ತಿಕವಾಗಿ ಯಾವ ದೇವಸ್ಥಾನಕ್ಕೂ ಹೋಗಲ್ಲ ಎಂದ ಸಚಿವ, ಬೇರೆಯವರು ಕರೆದಾಗ ಮಾತ್ರ ಅವರೊಂದಿಗೆ ಹೋಗುವ ವಾಡಿಕೆ ಇಟ್ಟುಕೊಂಡಿರುವುದಾಗಿ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ