ಕೀ ವಿಚಾರಕ್ಕೆ ಸ್ವರ್ಗದ ಮಂದಿ ಜೊತೆ ನರಕವಾಸಿಗಳ ಕಿರಿಕ್; ದೊಡ್ಡ ಜಗಳದ ಮುನ್ಸೂಚನೆ

Updated on: Oct 04, 2024 | 6:39 PM

ಬಿಗ್ ಬಾಸ್​ ಮನೆಯಲ್ಲಿ ಸಣ್ಣ ಸಣ್ಣ ವಿಚಾರಕ್ಕೂ ಜಗಳ ನಡೆಯುತ್ತಿದೆ. ಸ್ವರ್ಗವಾಸಿಗಳ ಜೊತೆ ನರಕವಾಸಿಗಳು ಜಗಳಕ್ಕೆ ನಿಂತಿದ್ದಾರೆ. ಕೀ ಇಟ್ಟುಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಜಗಳ ಆಗುವ ಮುನ್ಸೂಚನೆ ಕಾಣಿಸಿದೆ. ಚೈತ್ರಾ ಕುಂದಾಪುರ, ಶಿಶಿರ್​, ಮಾನಸಾ, ಮೋಕ್ಷಿತಾ ಪೈ, ಅನುಷಾ ರೈ, ಗೋಲ್ಡ್​ ಸುರೇಶ್​, ರಂಜಿತ್​ ಅವರು ನರಕದಲ್ಲಿ ಇದ್ದಾರೆ.

ಮಾತಿಗೆ ನಿಂತರೆ ಚೈತ್ರಾ ಕುಂದಾಪುರ ಅವರು ಎಲ್ಲರಿಗೂ ತಿರುಗೇಟು ನೀಡುತ್ತಾರೆ. ನರಕದಲ್ಲಿ ಇರುವ ಅವರು ಹತ್ತಾರು ತಂತ್ರಗಾರಿಕೆ ಮಾಡುತ್ತಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಮೊದಲ ವಾರದಲ್ಲಿ ಸಾಕಷ್ಟು ಕಿರಿಕ್​ಗಳು ನಡೆದಿವೆ. ‘ನರಕದವರು ಕೀ ಕಿತ್ತುಕೊಂಡರೆ ನೀರು ಕೂಡ ಕೊಡಲ್ಲ. ಸ್ಟೋರ್​ ರೂಮ್​ನಿಂದ ಊಟವನ್ನೂ ಕೊಡಲ್ಲ’ ಎಂದು ಉಗ್ರಂ ಮಂಜು ಸವಾಲು ಹಾಕಿದ್ದಾರೆ. ಇದರಿಂದ ದೊಡ್ಡ ಜಗಳ ಆದರೂ ಅಚ್ಚರಿ ಏನಿಲ್ಲ. ಸ್ವರ್ಗದಲ್ಲಿ 10 ಜನ, ನರಕದಲ್ಲಿ 7 ಜನ ಇದ್ದಾರೆ. ‘ಕಲರ್ಸ್​ ಕನ್ನಡ’ ವಾಹಿನಿ ಹಾಗೂ ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಶೋ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More