‘ಆತ್ಮಸಾಕ್ಷಿ ಬೇಡ್ವಾ’; ಸುದೀಪ್ ಪ್ರಕರಣದ ಅಸಲಿಯತ್ತು ಬಿಚ್ಚಿಟ್ಟ ಚಕ್ರವರ್ತಿ ಚಂದ್ರಚೂಡ್

Updated on: Jan 21, 2026 | 12:49 PM

ಕಿಚ್ಚ ಸುದೀಪ್ ಅವರು ‘ವಾರಸ್ದಾರ’ ಧಾರಾವಾಹಿಯ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಮಾತನಾಡಿದ್ದಾರೆ. 60 ಲಕ್ಷ ರೂಪಾಯಿ ನೀಡಬೇಕು ಎಂಬ ಪ್ರಕರಣದ ವಿಷಯ ಇದಾಗಿದೆ. ಈಗ ಚಕ್ರವರ್ತಿ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ.

‘ವಾರಸ್ದಾರ’ ಧಾರಾವಾಹಿ ಶೂಟಿಂಗ್ ವೇಳೆ ತಮ್ಮ ತೋಟ ನಾಶ ಮಾಡಲಾಗಿದೆ ಎಂಬ ಆರೋಪವನ್ನು ಚಿಕ್ಕಮಗಳೂರಿನ ದೀಪಕ್ ಮಯೂರ್ ಮಾಡಿದ್ದರು. ಈ ಧಾರಾವಾಹಿ ನಿರ್ಮಾಣ ಮಾಡಿದ್ದು ಸುದೀಪ್. ಸುದೀಪ್ ಹಾಗೂ ಅವರ ಆಪ್ತ ಚಕ್ರವರ್ತಿ ಚಂದ್ರಚೂಡ್ ಹಣ ಕೊಡೋದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ದೀಪಕ್ ದೂರು ನೀಡಿದ್ದಾರೆ. ಈ ಬಗ್ಗೆ ಚಕ್ರವರ್ತಿ ಚಂದ್ರಚೂಡ್ ಸ್ಪಷ್ಟನೆ ನೀಡಿದ್ದಾರೆ. ‘ದೀಪಕ್ ಉದ್ದೇಶಪೂರ್ವಕವಾಗಿ ಹೀಗೆ ಮಾಡುತ್ತಿದ್ದಾರೆ. ಅವರಿಗೆ ಆತ್ಮ ಸಾಕ್ಷಿಯೇ ಇಲ್ಲ’ ಎಂದಿದ್ದಾರೆ. ಸಂಪೂರ್ಣ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.