ಚಾಮರಾಜನಗರ: ಮದ್ವೆಯಲ್ಲೂ ಮೋದಿ ಪರ ಪ್ರಚಾರ ಮಾಡಿ ಅಭಿಮಾನ ಮೆರೆದ ಬಿಜೆಪಿ ಕಾರ್ಯಕರ್ತ; ಇಲ್ಲಿದೆ ವಿಡಿಯೋ
ಚಾಮರಾಜನಗರದ ಮಾಂಗಲ್ಯ ಕನ್ವೆನ್ಷನ್ ಹಾಲ್ನಲ್ಲಿ ನಿನ್ನೆ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿರಾಟ್‌ಶಿವು ಹಾಗೂ ಚೈತ್ರ ಎಂಬುವವರ ವಿವಾಹದಲ್ಲಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಿ ಎಂಬ ಘೋಷವಾಕ್ಯದೊಂದಿಗೆ ದೇಶದ ಭವ್ಯ ಭವಿಷ್ಯಕ್ಕೆ ಮತ್ತೊಮ್ಮೆ ಮೋದಿ ಬೆಂಬಲಿಸಿ ಎಂಬ ಪ್ರಧಾನಿಯ ಪ್ಲೇಕಾರ್ಡ್ ಗಿಫ್ಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಜೊತೆಗೆ ಎಲ್ಇಡಿ ಪರದೆಯಲ್ಲೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡಿದ್ದಾರೆ.
ಚಾಮರಾಜನಗರ, ಫೆ.02: ಬಿಜೆಪಿ ಕಾರ್ಯಕರ್ತ(BJP Worker)ನೊಬ್ಬ ತನ್ನ ಮದುವೆಯಲ್ಲೂ ಪ್ರಧಾನಿ ಮೋದಿ ಪರ ಪ್ರಚಾರ ಮಾಡಿ ಸ್ವಾಮಿ ನಿಷ್ಠೆ ಮೆರೆದಿದ್ದಾನೆ. ಮದುವೆ ಆಹ್ವಾನಿತರಿಗೆ ನರೇಂದ್ರ ಮೋದಿ ಅವರ ಭಾವಚಿತ್ರ ನೀಡಿ ಮತ್ತೊಮ್ಮೆ ಮೋದಿ ಗೆಲ್ಲಿಸಿ ಎಂದು ವಧು-ವರ ಮನವಿ ಮಾಡಿದ್ದಾರೆ. ಚಾಮರಾಜನಗರ(Chamarajanagara)ದ ಮಾಂಗಲ್ಯ ಕನ್ವೆನ್ಷನ್ ಹಾಲ್ನಲ್ಲಿ ನಿನ್ನೆ ನಡೆದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿರಾಟ್‌ಶಿವು ಹಾಗೂ ಚೈತ್ರ ಅವರ ವಿವಾಹದಲ್ಲಿ ಭವ್ಯ ಭಾರತದ ನಿರ್ಮಾಣಕ್ಕಾಗಿ ಮತ್ತೊಮ್ಮೆ ಮೋದಿ ಅವರನ್ನು ಬೆಂಬಲಿಸಿ ಎಂಬ ಘೋಷವಾಕ್ಯದೊಂದಿಗೆ ದೇಶದ ಭವ್ಯ ಭವಿಷ್ಯಕ್ಕೆ ಮತ್ತೊಮ್ಮೆ ಮೋದಿ ಬೆಂಬಲಿಸಿ ಎಂಬ ಪ್ರಧಾನಿಯ ಪ್ಲೇಕಾರ್ಡ್ ಗಿಫ್ಟ್ ನೀಡಿದ್ದಾರೆ. ಅಷ್ಟೇ ಅಲ್ಲ, ಜೊತೆಗೆ ಎಲ್ಇಡಿ ಪರದೆಯಲ್ಲೂ ನರೇಂದ್ರ ಮೋದಿ ಅವರ ಭಾವಚಿತ್ರ ಬಳಕೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ
Latest Videos