ನಮ್ಮ ಸಾಮಾಜಿಕ ವ್ಯವಸ್ಥೆ ನಿಶ್ಚಲಗೊಂಡಿದೆ, ಬಸವಾದಿ ಶರಣರು ಈಗ ಅತ್ಯಂತ ಪ್ರಸ್ತುತ ಅನಿಸುತ್ತಾರೆ: ಸಿದ್ದರಾಮಯ್ಯ
ನಾವೆಲ್ಲ ಭಾಗವಾಗಿರುವ ಇಂದಿನ ಸಾಮಾಜಿಕ ವ್ಯವಸ್ಥೆ ನಿಶ್ಚಲ ಸ್ಥಿತಿಗೆ ಬಂದಿದೆ. ಅದರೆ ಬಸವಾದಿ ಶರಣರು ಸಮಾಜದಲ್ಲಿ ಬದಲಾವಣೆಗಳನ್ನು ತಂದರು. ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು, ನಮ್ಮಲ್ಲಿ ಅಂಧಶ್ರದ್ಧೆ ಇರಬಾರದು, ಮೌಢ್ಯಗಳ ಅಚರಣೆ ತಪ್ಪಬೇಕು ಎಂದು ಶರಣರು ಸಾರಿದರು ಎಂದು ಸಿದ್ದರಾಮಯ್ಯ ಹೇಳಿದರು.
ಮುದ್ದೇಬಿಹಾಳ (ವಿಜಯಪುರ): ಸಾರ್ವಜನಿಕ ಸಮಾರಂಭಗಳಲ್ಲಿ ಮಾತಾಡುವಾಗ ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಬದುಕಿನ ಅನುಭವಗಳನ್ನು ಹೇಳಿಕೊಳ್ಳುವುದುಂಟು. ಇಂದು ಮುದ್ದೇಬಿಹಾಳದಲ್ಲಿ ನಡೆದ (Muddebihal) ಕಾರ್ಯಕ್ರಮವೊಂದರಲ್ಲಿ ಮಾತಾಡುವಾಗ ಸಮಾಜ ಸುಧಾರಣೆ ವಿಚಾರಕ್ಕೆ ಸಂಬಂಧಿಸಿದಂತೆ ಬಾಲ್ಯದ ಅನುಭವವನ್ನು ಥಳಕು ಹಾಕಿದರು. ಚಿಕ್ಕವರಾಗಿದ್ದಾಗ ಅವರು ನೀರು ತರಲು ಬಾವಿಗೆ (well) ಹೋಗುತ್ತಿದ್ದರಂತೆ. ಅದೊಂದು ಸೇದುವ ಬಾವಿಯಾಗಿದ್ದರಿಂದ (ಹಗ್ಗಕ್ಕೆ ಬಿಂದಿಗೆ ಕಟ್ಟಿ ನೀರೆತ್ತುವ ಬಾವಿ) ಇವರು ಹಗ್ಗ ಕಟ್ಟಿದ ಬಿಂದಿಗೆಯನ್ನು ಬಾವಿಗೆ ಬಿಟ್ಟು ನೀರೆಳೆಯುವ ಮೊದಲು ನೀರಲ್ಲಿ ಮೇಲ್ಮೈಯಲ್ಲಿ ಶೇಖರಣೆಯಾಗಿರುತ್ತಿದ್ದ ಕಸಕಡ್ಡಿಯನ್ನು ದೂರ ಮಾಡಲು, ಬಿಂದಿಗೆಯನ್ನು ನೀರಿನ ಮೇಲೆ ಹಲವಾರು ಸಲ ಅಪ್ಪಳಿಸುತ್ತಿದ್ದರಂತೆ. ಕಸ ಪಕ್ಕಕ್ಕೆ ಸರಿದ ಬಳಿಕ ಬಿಂದಿಗೆಯಲ್ಲಿ ನೀರನ್ನು ತುಂಬಿ ಮೇಲಕ್ಕೆಳೆಯುತ್ತಿದ್ದರಂತೆ. ಸ್ವಲ್ಪ ಹೊತ್ತಿನ ಬಳಿಕ ಕಸ ಮೊದಲಿನ ಸ್ಥಳಕ್ಕೆ ವಾಪಸ್ಸಾಗುತ್ತಿತ್ತು ಎಂದು ಹೇಳಿದ ಸಿದ್ದರಾಮಯ್ಯ, ಇದು ಇವತ್ತಿನ ನಮ್ಮ ಸಾಮಾಜಿಕ ವ್ಯವಸ್ಥೆಯನ್ನು ಹೋಲುತ್ತದೆ ಎಂದರು.
ನಾವೆಲ್ಲ ಭಾಗವಾಗಿರುವ ಇಂದಿನ ಸಾಮಾಜಿಕ ವ್ಯವಸ್ಥೆ ನಿಶ್ಚಲ ಸ್ಥಿತಿಗೆ ಬಂದಿದೆ. ಅದರೆ ಬಸವಾದಿ ಶರಣರು ಸಮಾಜದಲ್ಲಿ ಬದಲಾವಣೆಗಳನ್ನು ತಂದರು. ಮನುಷ್ಯರಾಗಿ ಬಾಳುವುದನ್ನು ಕಲಿಯಬೇಕು, ನಮ್ಮಲ್ಲಿ ಅಂಧಶ್ರದ್ಧೆ ಇರಬಾರದು, ಮೌಢ್ಯಗಳ ಅಚರಣೆ ತಪ್ಪಬೇಕು ಎಂದು ಶರಣರು ಸಾರಿದರು ಎಂದು ಹೇಳಿದ ಸಿದ್ದರಾಮಯ್ಯ ಕರ್ಮಸಿದ್ಧಾಂತವನ್ನು ಸಂಪೂರ್ಣವಾಗಿ ತಿರಸ್ಕರಿಸಿದವರು ಯಾರಾದರೂ ಇದ್ದರೆ ಅದು ಬಸವಾದಿ ಶರಣರು ಮಾತ್ರ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿದ್ದರಾಮಯ್ಯ ರಾಜ್ಯ ತಾಲಿಬಾನೀ ಸರ್ಕಾರದ ಮುಖ್ಯಸ್ಥರಾಗಿದ್ದಾರೆ: ಪ್ರತಾಪ್

ದೆಹಲಿಯಲ್ಲಿ ಅಗ್ನಿ ಅವಘಡ, ಪ್ರಾಣ ಉಳಿಸಿಕೊಳ್ಳಲು ಎರಡನೇ ಮಹಡಿಯಿಂದ ಜಿಗಿದ ಜನ

ಚಾಮರಾಜನಗರ: ಒಂಟಿ ಸಲಗದ ಮುಂದೆ ನಿಂತು ಪ್ರವಾಸಿಗರ ಹುಚ್ಚಾಟ

ಗ್ಯಾರಂಟಿ ಸ್ಕೀಮ್ ಹಣ ಶೀಘ್ರದಲ್ಲೇ ಫಲಾನುಭವಿಗಳಿಗೆ ನೀಡಲಾಗುವುದು: ಯತೀಂದ್ರ
