Vijayapura: ಮುದ್ದೇಬಿಹಾಳ ತಾಲೂಕಿನ ಜಗದ್ಗುರು ಶ್ರೀರೇವಣಸಿದ್ದೇಶ್ವರ ಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

Vijayapura: ಮುದ್ದೇಬಿಹಾಳ ತಾಲೂಕಿನ ಜಗದ್ಗುರು ಶ್ರೀರೇವಣಸಿದ್ದೇಶ್ವರ ಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

ಅಶೋಕ ಯಡಳ್ಳಿ, ವಿಜಯಪುರ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2024 | 7:20 PM

ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಶಂಕು‌ ಸ್ಥಾಪನೆ ಹಿನ್ನೆಲೆ ಇಂದು ಸಿಎಂ ಸಿದ್ದರಾಮಯ್ಯ ವಿಜಯಪುರಕ್ಕೆ ಭೇಟಿ ನೀಡಿದರು. ಈ ವೇಳೆ ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಲು‌ಮತ ಮೂಲ ಜಗದ್ಗುರು ಪೀಠಕ್ಕೆ ಭೇಟಿ ನೀಡಿ ಹಾಲುಮತದ ಮೂಲ ಗುರುಪೀಠದಲ್ಲಿ ಮಹಾಮಂಗಳಾರತಿ ಮಾಡಿದ್ದಾರೆ.

ವಿಜಯಪುರ, ಫೆಬ್ರುವರಿ 2: ಜಿಲ್ಲೆ‌ಯ ಮುದ್ದೇಬಿಹಾಳ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ಶಂಕು‌ ಸ್ಥಾಪನೆ ಕಾರ್ಯಕ್ರಮದ ಬಳಿಕ ಸಿಎಂ ಸಿದ್ದರಾಮಯ್ಯ (Siddaramaiah) ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಮುದ್ದೇಬಿಹಾಳ ತಾಲೂಕಿನ ಸರೂರು ಗ್ರಾಮದ ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಲು‌ಮತ ಮೂಲ ಜಗದ್ಗುರು ಪೀಠಕ್ಕೆ ಭೇಟಿ ನೀಡಿದರು. ಈ ವೇಳೆ ಮಹಿಳೆಯರು ಆರತಿ ಬೆಳಗಿ ಪೀಠಕ್ಕೆ ಸ್ವಾಗತ ಕೋರಿದರು. ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರ ಹಾಲು‌ಮತ ಮೂಲ ಜಗದ್ಗುರು ಪೀಠದ ಶ್ರೀ ಶಾಂತಮಯಿ ಸ್ವಾಮೀಜಿ ಸಿಎಂ ಸಾಥ್ ನೀಡಿದ್ದು, ಹಾಲುಮತದ ಮೂಲ ಗುರುಪೀಠದಲ್ಲಿ ಮಹಾಮಂಗಳಾರತಿ ಮಾಡಿದ್ದಾರೆ. ಸಿಎಂಗೆ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್, ಸಚಿವ ಶಿವಾನಂದ ಪಾಟೀಲ್, ಶಾಸಕ ಸಿ‌ಎಸ್ ನಾಡಗೌಡ, ಯಶವಂತರಾಯಗೌಡ ಪಾಟೀಲ್ ಅಶೋಕ ಮನಗೂಳಿ ಸಾಥ್ ನೀಡಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.