ನನಗೆ ಊಟ, ತಿಂಡಿ ಬೇಕಿಲ್ಲ: 8 ಲೀಟರ್​ ಆಯಿಲ್​ ಕುಡಿಯುತ್ತೇನೆ ಎಂದ ವ್ಯಕ್ತಿ

Updated By: ಗಂಗಾಧರ​ ಬ. ಸಾಬೋಜಿ

Updated on: Aug 30, 2025 | 2:50 PM

ಕೊಲ್ಲೇಗಾಲದ ಕುಮಾರ ಎಂಬ ವ್ಯಕ್ತಿ 29 ವರ್ಷಗಳಿಂದ ವೇಸ್ಟ್ ಆಯಿಲ್ ಕುಡಿಯುತ್ತಿದ್ದಾರೆ. ಅವರು ಶಬರಿಮಲೆಗೆ ನಡೆದುಕೊಂಡು ಹೋಗುವುದು ವಾಡಿಕೆ ಮತ್ತು ದಿನಕ್ಕೆ ಎಂಟು ಲೀಟರ್ ವೇಸ್ಟ್ ಆಯಿಲ್ ಕುಡಿಯುತ್ತಾರೆ ಎಂದು ಹೇಳಿದ್ದಾರೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ವಿಡಿಯೋ ನೋಡಿ.

ಚಾಮರಾಜನಗರ, ಆಗಸ್ಟ್​ 30: ಇಂಜಿನ್ ಆಯಿಲ್ (Engine Oil) ಕುಡಿದು ಬದುಕುತ್ತಿರುವ ವ್ಯಕ್ತಿಯನ್ನು ಎಂದಾದರೂ, ಎಲ್ಲಿಯಾದರೂ ನೋಡಿದ್ದೀರಿ. ನೋಡಿಲ್ಲ ಅಂದರೆ ನೋಡಿ. ವಿಡಿಯೋದಲ್ಲಿ ಕಾಣಿಸುತ್ತಿರುವ ವ್ಯಕ್ತಿಯೇ ಆಯಿಲ್​ ಮ್ಯಾನ್​, ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ವಾಸವಾಗಿರುವ ಕುಮಾರ್ ಎಂಬುವವರು ಕಳೆದ 29 ವರ್ಷಗಳಿಂದ ನಿರಂತರವಾಗಿ ಇಂಜಿನ್ ಆಯಿಲ್ ಕುಡಿಯುತ್ತಿದ್ದಾರೆ. ಈ ಕುರಿತಾಗಿ ಅವರೇ ಮಾತನಾಡಿದ್ದು, ಏನು ಹೇಳಿದರು ಕೇಳಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 30, 2025 09:55 AM