ಚಾಮರಾಜನಗರ: 40ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಗ್ರಾಮಕ್ಕೆ ಲಗ್ಗೆ, ಬೆಚ್ಚಿಬೀಳಿಸುವ ವಿಡಿಯೋ ಇಲ್ಲಿದೆ ನೋಡಿ

Updated By: Ganapathi Sharma

Updated on: Dec 03, 2025 | 8:14 AM

ಚಾಮರಾಜನಗರ ಜಿಲ್ಲೆಯ ತಮಿಳುನಾಡು ಗಡಿ ಭಾಗದ ರೈತರು ಕಾಡಾನೆ ಭೀತಿಯಿಂದ ಜಮೀನುಗಳಿಗೆ ತೆರಳದೆ ಮನೆಯಲ್ಲೇ ಉಳಿಯುವಂತಾಗಿದೆ. ಅರಳವಾಡಿ ಹಾಗೂ ತಾಳವಾಡಿ ಗ್ರಾಮಗಳ ಬಳಿ 40ಕ್ಕೂ ಹೆಚ್ಚು ಕಾಡಾನೆಗಳು ಬೀಡುಬಿಟ್ಟಿದ್ದು, ರೈತರನ್ನು ಬೆಚ್ಚಿಬೀಳಿಸಿದೆ. ಕಾಡಾನೆ ಹಿಂಡು ಗ್ರಾಮದಲ್ಲಿ ಸಂಚರಿಸುತ್ತಿರುವ ಭಯಾನಕ ವಿಡಿಯೋ ಇಲ್ಲಿದೆ ನೋಡಿ.

ಚಾಮರಾಜನಗರ, ಡಿಸೆಂಬರ್ 3: ಕರ್ನಾಟಕ ತಮಿಳುನಾಡು ಗಡಿ ಭಾಗದಲ್ಲಿ ಕಾಡಾನೆಗಳ ಹಿಂಡು ಮತ್ತೆ ಪ್ರತ್ಯಕ್ಷವಾದ ಹಿನ್ನೆಲೆಯಲ್ಲಿ ಸ್ಥಳೀಯರು ಆತಂಕಕ್ಕೊಳಗಾಗಿದ್ದಾರೆ. ಕರ್ನಾಟಕ ಗಡಿಗೆ ಹೊಂದಿಕೊಂಡಿರುವ ತಮಿಳುನಾಡಿನ ಅರಳವಾಡಿ ಹಾಗೂ ತಾಳವಾಡಿ ಗ್ರಾಮಗಳ ಬಳಿ 40ಕ್ಕೂ ಹೆಚ್ಚು ಕಾಡಾನೆಗಳು ಕಳೆದ ಒಂದು ವಾರದಿಂದ ಆಗಾಗ ಕಾಣಿಸಿಕೊಳ್ಳುತ್ತಿವೆ. ಅಲ್ಲದೆ, ಈಗ ಆನೆಗಳ ಹಿಂಡು ಅಲ್ಲೇ ಬೀಡುಬಿಟ್ಟಿರುವುದು ರೈತರಲ್ಲಿ ಭೀತಿಗೆ ಕಾರಣವಾಗಿದೆ. ಗಜಪಡೆ ಹೊಲಗಳ ಸುತ್ತಮುತ್ತಲೇ ತಿರುಗಾಡುತ್ತಿರುವುದರಿಂದ ಜಮೀನಿಗೆ ತೆರಳಲು ಭಯಗೊಂಡ ರೈತರು ಮನೆಯಲ್ಲೇ ಉಳಿಯುವಂತಾಗಿದೆ. ಕಾಡಾನೆಗಳನ್ನು ಸುರಕ್ಷಿತವಾಗಿ ಕಾಡಿನೊಳಕ್ಕೆ ಓಡಿಸುವಂತೆ ಮತ್ತು ಗ್ರಾಮಗಳಿಗೆ ನುಗ್ಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ರೈತರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ