ಟೊಮೆಟೊ ಬೆಲೆ ಕುಸಿತ: ರೈತರಿಂದ ರಸ್ತೆಗೆ ಟೊಮೆಟೊ ಸುರಿದು ಆಕ್ರೋಶ

Edited By:

Updated on: Mar 20, 2026 | 5:23 PM

ಚಾಮರಾಜನಗರದಲ್ಲಿ ಟೊಮೆಟೊ ಬೆಲೆ ಕುಸಿತದಿಂದ ರೋಸಿಹೋದ ರೈತರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟಿಸಿದರು. ಮೈಸೂರು ಎಪಿಎಂಸಿ ದರಕ್ಕಿಂತ ಎರಡು ರೂಪಾಯಿ ಕಡಿಮೆ ಬೆಲೆ ನೀಡುವಂತೆ ದಲ್ಲಾಳಿಗಳೊಂದಿಗೆ ಹೋರಾಟ ನಡೆಸಿದರು. ಜಿಲ್ಲಾಧಿಕಾರಿಗಳು ಸಭೆ ನಡೆಸಿ, ರೈತರ ಬೇಡಿಕೆಗೆ ಸಮ್ಮತಿಸಿ ಮೈಸೂರು ದರ ನೀಡಲು ಆದೇಶಿಸಿದರು.

ಚಾಮರಾಜನಗರ, ಮಾರ್ಚ್ 20: ನಗರದಲ್ಲಿ ಟೊಮೆಟೊ ಬೆಲೆ ಕುಸಿತದಿಂದ ಆಕ್ರೋಶಗೊಂಡ ರೈತರು ರಸ್ತೆಗೆ ಟೊಮೆಟೊ ಸುರಿದು ಪ್ರತಿಭಟಿಸಿದ್ದಾರೆ. ಪಕ್ಕದ ಮೈಸೂರಿನ ಎಪಿಎಂಸಿಯಲ್ಲಿರುವ ದರಕ್ಕಿಂತಲೂ ಕಡಿಮೆ ಬೆಲೆ ಸಿಗುತ್ತಿರುವುದನ್ನು ಖಂಡಿಸಿ, ಮೈಸೂರು ಎಪಿಎಂಸಿ ದರದಲ್ಲಿ ಖರೀದಿಸುವಂತೆ ಆಗ್ರಹಿಸಿದರು. ದಲ್ಲಾಳಿಗಳು ಈ ಬೇಡಿಕೆಗೆ ಒಪ್ಪದ ಕಾರಣ, ರೈತರು ಟೊಮೆಟೊಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us
ಸೂರಜ್ ಪ್ರಸಾದ್ ಎಸ್ಎನ್

ಸೂರಜ್ ಪ್ರಸಾದ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದಾರೆ. 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದರು. ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದಾರೆ. ಟಿವಿ9 ಕನ್ನಡ ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು ಇವರ ಹವ್ಯಾಸ.

Read More