Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಪ್ರತಿ ದಿನ ಮನಸ್ತಾಪ’: ನಿವೇದಿತಾ ಗೌಡ ಜತೆಗಿನ ಸಮಸ್ಯೆ ಬಹಿರಂಗಪಡಿಸಿದ ಚಂದನ್​ ಶೆಟ್ಟಿ

‘ಪ್ರತಿ ದಿನ ಮನಸ್ತಾಪ’: ನಿವೇದಿತಾ ಗೌಡ ಜತೆಗಿನ ಸಮಸ್ಯೆ ಬಹಿರಂಗಪಡಿಸಿದ ಚಂದನ್​ ಶೆಟ್ಟಿ

ಮದನ್​ ಕುಮಾರ್​
|

Updated on:Jun 10, 2024 | 6:53 PM

‘ಮಾನಸಿಕವಾಗಿ ನೋವು ಅನುಭವಿಸಿಕೊಂಡು ಒಟ್ಟಿಗೆ ಇರೋದು ಸರಿ ಆಗಲಿಲ್ಲ. ಹಾಗಾಗಿ ಒಮ್ಮತದಿಂದ ನಿಚ್ಛೇದನದ ನಿರ್ಧಾರ ಮಾಡಿದೆವು. ನಾವಿಬ್ಬರು ಬೇರೆ ಬೇರೆ ಆಗಿದ್ದರೆ ಮಾತ್ರ ಖುಷಿಯಾಗಿ ಇರುತ್ತೇವೆ. ನಮ್ಮಿಬ್ಬರ ನಡುವೆ ದ್ವೇಷ, ವೈಮನಸ್ಸು ಏನೂ ಇಲ್ಲ. ಅವರ ಬೆಳವಣಿಗೆ ಬಗ್ಗೆ ನನಗೆ ಖುಷಿ ಇದೆ’ ಎಂದು ಚಂದನ್​ ಶೆಟ್ಟಿ ಹೇಳಿದ್ದಾರೆ.

ನಿವೇದಿತಾ ಗೌಡ (Niveditha Gowda) ಮತ್ತು ಚಂದನ್​ ಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಕೆಲವೊಂದು ವಿಚಾರಗಳನ್ನು ಸ್ಪಷ್ಟಪಡಿಸಿದ್ದಾರೆ. ವಿಚ್ಛೇದನದ ಬಗ್ಗೆ ಅವರು ಮೊದಲ ಬಾರಿಗೆ ಮಾತನಾಡಿದ್ದಾರೆ. ಡಿವೋರ್ಸ್​ (Niveditha Gowda Divorce) ಪಡೆಯಲು ಕಾರಣ ಏನು ಎಂಬುದನ್ನು ಚಂದನ್​ ವಿವರಿಸಿದ್ದಾರೆ. ‘ಕಳೆದ ಕೆಲವು ವರ್ಷಗಳಿಂದ ನಾನು ಬೆಳೆದಂತಹ ರೀತಿ ಬೇರೆ. ನನ್ನ ಜೀವನ ಶೈಲಿ ಒಂದು ಆಯಾಮದಲ್ಲಿ ಹೋದರೆ, ನಿವೇದಿತಾ ಅವರ ಯೋಚನೆ, ಆಲೋಚನೆ, ಜೀವನ ಶೈಲಿ ಬೇರೆ ಆಯಾಮದಲ್ಲಿ ಬೆಳೆಯುತ್ತಾ ಹೋಯಿತು. ನಾನು ಮತ್ತು ನಿವೇದಿತಾ ಅವರು ಜೀವನವನ್ನು ಅರ್ಥ ಮಾಡಿಕೊಂಡಿರುವುದು ತುಂಬ ಡಿಫರೆಂಟ್​ ಆಗಿತ್ತು. ಅವು ಒಂದಕ್ಕೊಂದು ಹೊಂದಾಣಿಕೆ ಆಗಲೇ ಇಲ್ಲ. ಸರಿಯಾಗಿ ಹೊಂದಿಕೊಂಡು ಹೋಗಬೇಕು ಅಂತ ನಾವು ಸಾಕಷ್ಟು ಕಷ್ಟಪಟ್ಟೆವು. ಪ್ರತಿ ದಿನ ಮನಸ್ತಾಪಗಳು ಬರುತ್ತಿದ್ದಾಗ ಒಬ್ಬರಿಗೊಬ್ಬರು ನಾವು ಗೌರವ ನೀಡಲೇಬೇಕು. ಅವರಿಗೆ ಎಷ್ಟು ಹಕ್ಕು ಇರುತ್ತೋ ನಮಗೂ ಅಷ್ಟೇ ಹಕ್ಕು ಇರುತ್ತದೆ. ಯಾರೂ ಕೂಡ ಒಬ್ಬರ ಜೊತೆ ಬಲವಂತಕ್ಕೆ ಇರೋದು ಸರಿಯಲ್ಲ’ ಎಂದು ಚಂದನ್​ ಶೆಟ್ಟಿ (Chandan Shetty)ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Jun 10, 2024 06:27 PM