AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ

ಅಣ್ಣಾವ್ರ ಹುಟ್ಟುಹಬ್ಬದ ದಿನ ರಿಲೀಸ್ ಆಗಲಿದೆ ಚಂದನ್ ಶೆಟ್ಟಿ ಹೊಸ ಸಿನಿಮಾ

ಮದನ್​ ಕುಮಾರ್​
|

Updated on:Apr 20, 2026 | 10:50 PM

Share

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ‘ಎಲ್ರ ಕಾಲೆಳೆಯುತ್ತ ಕಾಲ’ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ ಏಪ್ರಿಲ್ 24ರಂದು ರಿಲೀಸ್ ಆಗುತ್ತಿದೆ.

ಗಾಯಕ, ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಅವರು ಹೀರೋ ಆಗಿ ನಟಿಸಿರುವ ‘ಎಲ್ರ ಕಾಲೆಳೆಯುತ್ತ ಕಾಲ’ (Elra Kaaleliyatte Kaala) ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಸಿನಿಮಾ ಏಪ್ರಿಲ್ 17ರಂದು ರಿಲೀಸ್ ಆಗಬೇಕಿತ್ತು. ಆದರೆ ಕಾರಣಾಂತರಗಳಿಂದ 24ರಂದು ರಿಲೀಸ್ ಆಗುತ್ತಿದೆ. ಅಂದು ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬ. ಆ ವಿಶೇಷ ದಿನದಂದು ಸಿನಿಮಾ ಬಿಡುಗಡೆ ಆಗುತ್ತಿರುವುದಕ್ಕೆ ಚಂದನ್ ಶೆಟ್ಟಿ (Chandan Shetty) ಅವರಿಗೆ ಖುಷಿ ಇದೆ. ಈ ಸಿನಿಮಾಗೆ ಬೆಂಬಲ ನೀಡಲು ಹಿರಿಯ ನಟಿ ತಾರಾ ಅವರು ಸುದ್ದಿಗೋಷ್ಠಿಗೆ ಆಗಮಿಸಿದ್ದಾರೆ. ‘ತುಂಬ ಪ್ರೀತಿಯಿಂದ ನಾವು ಕೆಲಸ ಮಾಡಿದ್ದೇವೆ. ಈ ಸಿನಿಮಾದಿಂದ ನಿರ್ಮಾಪಕರಿಗೆ ಒಳ್ಳೆಯದಾಗಬೇಕು. ನಾವು ನಿಮ್ಮ ಕಾಲು ಹಿಡಿಯುತ್ತೇವೆ. ನೀವು ನಮ್ಮ ಕೈ ಹಿಡಿಯಿರಿ’ ಎಂದು ಪ್ರೇಕ್ಷಕರಿಗೆ ಹೇಳುವ ಮೂಲಕ ಚಂದನ್ ಶೆಟ್ಟಿ ಅವರು ಬೆಂಬಲ ಬೇಡಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Apr 20, 2026 10:40 PM
Follow Us