MLA Gets Bail: ಬ್ರಹ್ಮಾಂಡ ಭ್ರಷ್ಟತನದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು, ಊರಲ್ಲಿ ಸಂಭ್ರಮ!

MLA Gets Bail: ಬ್ರಹ್ಮಾಂಡ ಭ್ರಷ್ಟತನದ ಆರೋಪ ಹೊತ್ತಿರುವ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು, ಊರಲ್ಲಿ ಸಂಭ್ರಮ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Mar 07, 2023 | 2:47 PM

ನಾಯಕನೊಬ್ಬ ಜೈಲಿನಿಂದ ಹೊರಬಂದಾಗ, ಜಾಮೀನು ಪಡೆದಾಗ ಹೀಗೆ ಆಚರಿಸುವ ಹೊಸ ಸಂಸ್ಕೃತಿ ನಮ್ಮಲ್ಲಿ ಆರಂಭವಾಗಿದೆ.

ದಾವಣಗೆರೆ: ಇವರ ಸಂಭ್ರಮ, ಸಡಗರ ನೋಡುತ್ತಿದ್ದರೆ ಭಾರತ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯ ಇಲ್ಲವೇ ಯುದ್ದ ಗೆದ್ದಿದಿಯೇನೋ ಅನಿಸುತ್ತದೆ. ಆದರೆ ಅಸಲು ಸಂಗತಿಯೇನು ಗೊತ್ತಾ? ಇಲ್ಲಿ ಹುಚ್ಚೆದ್ದು ಕುಣಿಯತ್ತಿರುವವರು ಜಿಲ್ಲೆಯ ಚನ್ನಗಿರಿ (Channagiri) ಪಟ್ಣಣದವರು. ಪ್ರಚಂಡ ಭ್ರಷ್ಟಾಚಾರ ನಡೆಸಿರುವ ಆರೋಪ ಹೊತ್ತು ತಲೆಮರೆಸಿಕೊಂಡಿದ್ದ ಇಲ್ಲಿನ ಶಾಸಕ ಮಾಡಾಳ್ ವಿರೂಪಾಕ್ಷಪ್ಪಗೆ (Madal Virupakshappa) ಹೈಕೋರ್ಟ್ ನಿರೀಕ್ಷಣಾ ಜಮೀನು (anticipatory bail) ನೀಡಿದೆ. ನಾಯಕನೊಬ್ಬ ಜೈಲಿನಿಂದ ಹೊರಬಂದಾಗ, ಜಾಮೀನು ಪಡೆದಾಗ ಹೀಗೆ ಆಚರಿಸುವ ಹೊಸ ಸಂಸ್ಕೃತಿ ನಮ್ಮಲ್ಲಿ ಆರಂಭವಾಗಿದೆ. ಬ್ರಹ್ಮಾಂಡ ಭ್ರಷ್ಟ ಆರೋಪ ಹೊತ್ತ ನಾಯಕನಿಗೂ ಜನ ಹೀಗೆ ಸಂಭ್ರಮಿಸುತ್ತಾರೆಂದರೆ ಏನಾದರೂ ಹೇಳಲು ಸಾಧ್ಯವೇ? ನೋ ಮಾರಾಯ್ರೇ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Mar 07, 2023 02:47 PM