ಚನ್ನಪಟ್ಟಣ ಉಪಚುನಾವಣೆಗೆ ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವೆ -ಸಿ.ಪಿ. ಯೋಗೇಶ್ವರ್

Edited By:

Updated on: Sep 05, 2024 | 10:53 AM

ಚನ್ನಪಟ್ಟಣ ಉಪಚುನಾವಣೆಗೆ ಬಹುತೇಕ ಸ್ಪರ್ಧೆ ಮಾಡಲೇಬೇಕು ಅಂತಾ ಅಂದುಕೊಂಡಿದ್ದೇನೆ. ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವ ಇಂಗಿತ ಇದೆ ಎಂದು ಬಿಜೆಪಿ MLC ಯೋಗೇಶ್ವರ್ ರಾಮನಗರದಲ್ಲಿ ಹೇಳಿದರು. ಉಪಚುನಾವಣೆಗಾಗಿ ನನ್ನ ನಿಲುವು ಯಾಕೆ ಬದಲಾಯಿಸಿಕೊಳ್ಳಲಿ. ನನ್ನ ಮೊದಲನೇ ಚುನಾವಣೆ ರಿಸಲ್ಟ್ ಬಂದು 26 ವರ್ಷ ಆಯ್ತು ಎಂದರು.

ರಾಮನಗರ, ಸೆ.05: ಚನ್ನಪಟ್ಟಣ ಉಪಚುನಾವಣೆಗೆ JDS ಪಕ್ಷದ ಅಭ್ಯರ್ಥಿಯೇ ಸ್ಪರ್ಧಿಸುವುದು ಫಿಕ್ಸ್ ಎಂಬ ಮಾಹಿತಿ ಹೊರ ಬಿದ್ದಿತ್ತು. ಆದರೆ ಇದೀಗ ಬಿಜೆಪಿ MLC ಯೋಗೇಶ್ವರ್ ರಾಮನಗರದಲ್ಲಿ ಟಿವಿ9ಗೆ ಹೇಳಿಕೆ ನೀಡಿದ್ದು ಚುನಾವಣೆ ನಿಲ್ಲಲೇಬೇಕಿರುವ ಒತ್ತಡ ಕಾರ್ಯಕರ್ತರು ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಅಂತ ಅನ್ಕೊಂಡಿದ್ದೀನಿ. ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವ ಇಂಗಿತ ಇದೆ ಎಂದಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಕಾರ್ಯಕರ್ತರು ಒತ್ತಡ ಹಾಕಿದ್ದಾರೆ. ಬಹುತೇಕ ಸ್ಪರ್ಧೆ ಮಾಡಲೇಬೇಕು ಅಂತಾ ಅಂದುಕೊಂಡಿದ್ದೇನೆ. ಚಿಹ್ನೆ ಯಾವುದಾದ್ರೂ ಇರಲಿ, ಸ್ಪರ್ಧೆ ಮಾಡುವ ಇಂಗಿತ ಇದೆ. ಎಲ್ಲವನ್ನೂ ಪಕ್ಷದ ವರಿಷ್ಠರಿಗೆ ಬಿಟ್ಟಿದ್ದೇನೆ. ಪಕ್ಷದ ಮುಖಂಡರ ಆದೇಶದ ಮೇಲೆ ತೀರ್ಮಾನ ಮಾಡ್ತೇನೆ. ಸ್ಪರ್ಧೆ ಮಾಡಲೇಬೇಕು ಅಂತಾ ನಾನು ದಿಟ್ಟವಾಗಿ ಹೇಳುತ್ತಿದ್ದೆ. ಈಗಲೂ ಅದೇ‌ ನಿಲುವಿಗೆ ನಾನು ಬದ್ಧನಾಗಿದ್ದೇನೆ. ಎರಡೂ ಪಕ್ಷಗಳ ಮುಖಂಡರು ಕುಳಿತು ತೀರ್ಮಾನ ಹೇಳಲಿ. ಉಪಚುನಾವಣೆಗಾಗಿ ನನ್ನ ನಿಲುವು ಯಾಕೆ ಬದಲಾಯಿಸಿಕೊಳ್ಳಲಿ. ನನ್ನ ಮೊದಲನೇ ಚುನಾವಣೆ ರಿಸಲ್ಟ್ ಬಂದು 26 ವರ್ಷ ಆಯ್ತು.

ನನಗೆ ಆದಂತಹ ಬೆಂಬಲ ಕ್ಷೇತ್ರದಲ್ಲಿದೆ. ಹೆಗಲಿಗೆ ಹೆಗಲು ಕೊಟ್ಟವರು ಚುನಾವಣೆಗೆ ಸ್ಪರ್ಧಿಸಿ ಅಂತಿದ್ದಾರೆ. ನಾನೂ ಕೂಡ ಚುನಾವಣೆಗಳಿಂದ ಬೇಸತ್ತಿದ್ದೇನೆ. ಎನ್​​ಡಿಎ ಮೈತ್ರಿಕೂಟಕ್ಕೆ ನನ್ನಿಂದ ತೊಂದರೆ ಆಗಬಾರದು. ಮೈತ್ರಿ ಮುರಿದ ಎಂಬ ಅಪಕೀರ್ತಿ ಬರಬಾರದು ಎಂದು ರಾಮನಗರದಲ್ಲಿ ಟಿವಿ9ಗೆ ಬಿಜೆಪಿ MLC ಯೋಗೇಶ್ವರ್ ತಿಳಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ

Follow Us
Syed Nizamuddin

ಕಳೆದ ನಾಲ್ಕು ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, ಹಲವು ಬಗೆಯ ಡಿಪಾರ್ಟ್ಮೆಂಟ್ ಗಳಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದೆ. ಪ್ರಥಮದಲ್ಲಿ ಟಿವಿ9 ಮುಖ್ಯ ಕಚೇರಿಯಲ್ಲಿಯೇ ಕೆಲಸ ಮಾಡಿ,‌ಮೆಟ್ರೋ,ಪೊಲಿಟಿಕಲ್, ಕ್ರೈಂ ಹಾಗೂ ಲೈಫ್ ಸ್ಟೈಲ್ ನ ವಿಭಾಗದಲ್ಲೂ ಕೆಲಸ ಮಾಡುವ ಅವಕಾಶ ದೊರಕಿತ್ತು. ಕೊರೊನಾ ಸಂದರ್ಭದಲ್ಲಿ ಮಾಡಿದ ಕೇಸ್ ಸ್ಟಡಿಸ್, ನಂತರ ಬ್ಲ್ಯಾಕ್ ಫಂಗಸ್ ಗಾಗಿ ಒಂದು ತಿಂಗಳು ವಿಜಯಪುರ ಜಿಲ್ಲೆ, ಬಳಿಕ ಎರಡು ವರ್ಷ ಆನೆಕಲ್‌ ನಲ್ಲಿ ಕೆಲಸ ಮಾಡಿ ಕಳೆದ ಆರು ತಿಂಗಳಿನಿಂದ ರಾಮನಗರ ಜಿಲ್ಲೆಯಲ್ಲಿ ಕೆಲಸ ನಿಭಾಯಿಸುತ್ತಿದ್ದೇನೆ. ಖುಷಿ ಕೊಟ್ಟ ಸಾವಿರಾರು ಸುದ್ದಿಗಳ ಮಧ್ಯೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚಿಟ್ ಚಾಟ್ ಬಹಳ ತೃಪ್ತಿ ತಂದ ಹೈಲೇಟ್.. ಆನೇಕಲ್‌ ನ ಡ್ರಗ್ಸ್ ಸ್ಟೋರಿ, ಪರಪ್ಪನ ಅಗ್ರಹಾರದ ಆಫಿಸರ್ಸ್ ಸ್ಕ್ಯಾಂಡಲ್, ಎಲೆಕ್ಟ್ರಾನಿಕ್ ಸಿಟಿ ಯ ಟೋಯಿಂಗ್ ಬಂದ್, ಸರ್ಜಾಪುರದ ಪ್ರವಾಹ ಸಂದರ್ಭ,ಹೀಗೆ ಹತ್ತು ಹಲವು ಸುದ್ದಿಗಳು ಖಷಿ ಕೊಟ್ಟಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಹಲವು ರಾಜ್ಯಗಳಿಗೆ ತೆರಳಿ ಹಿಂದಿ‌ಹಾಗೂ ಕನ್ನಡಕ್ಕೆ ಕೆಲಸ ಮಾಡೋ ಅವಕಾಶ ನನ್ನ ಇನ್ಪುಟ್ ಟೀಂ ಕೊಟ್ಟಿದೆ. ಇನ್ನು ಹವ್ಯಾಸ ಗ್ಗೆ ಹೇಳೋದಾದ್ರೆ, ಸಂಗೀತ,ಕೇಳೊದು,ಹಾಡೋದು ಇಷ್ಟ. ಕ್ರೀಡೆ ವಿಚಾರಕ್ಕೆ ಬಂದ್ರೆ ಕ್ರಿಕೆಟ್ ಅಂಡ್ ಕಬ್ಬಡ್ಡಿ ಸ್ವಿಮಿಂಗ್. ಸ

Read More