ಖಾಕಿ ತೊಟ್ಟಿರೋದೇ ಪ್ರತಾಪ ಮೆರೆದು ಜನರನ್ನು ಹೆದರಿಸಲು ಎನ್ನುವಂತಿದೆ ಸಿಪಿಐ ದಿವಾಕರನ ವರಸೆ!
ಸಮಸ್ಯೆ ಏನೆಂದರೆ ದಿವಾಕರ್ ಗೆ ಸಾರ್ವಜನಿಕರೊಂದಿಗೆ ಹೇಗೆ ಮಾತಾಡಬೇಕು, ವರ್ತಿಸಬೇಕು ಅನ್ನೋದು ಗೊತ್ತಿಲ್ಲ. ಖಾಕಿ ತೊಟ್ಟಿರೋದೇ ಆವಾಜ್ ಹಾಕೋದಿಕ್ಕೆ ಅನ್ನುವಂತಿದೆ ಅವರ ವರ್ತನೆ.
ಅಮಾಯಕರು, ಮುಗ್ಧ ಜನರೆದುರು ಖಾಕಿ ವಸ್ತ್ರಧಾರಿ ಪೊಲೀಸರು ದರ್ಪ ಪ್ರದರ್ಶಿಸುವುದು, ಸುಖಾಸುಮ್ಮನೆ ಹೆದರಿಸುವುದು ಹೊಸ ಸಂಗತಿಯೇನಲ್ಲ. ಖಾಕಿ ಮಹಿಮೆಯೇ ಹಾಗಿರಬಹುದೇನೋ. ಒಂದು ಕನ್ನಡ ಸಿನಿಮಾನಲ್ಲಿ ಆ ಚಿತ್ರದ ನಾಯಕ ಸಾಯಿಕುಮಾರ್ ಅವರು ಪೊಲೀಸ್ ಅಂದರೇನು ಅಂತ ವಿವರಣೆ ಕೊಡುತ್ತಾರೆ. ಅವರು ನೀಡಿದ ವಿವರಣೆಯಿಂದ ರಾಜ್ಯ ಪೊಲೀಸ್ ಇಲಾಖೆ ಸಹ ಇಂಪ್ರೆಸ್ ಆಗಿತ್ತು. ಎಲ್ಲ ಸರಿ, ಖಾಕಿ ಧರಿಸಿದವರೆಲ್ಲ ದರ್ಪ ತೋರುತ್ತಾರೆ ಅನ್ನೋದು ಸುಳ್ಳು. ಈ ಇಲಾಖೆಯಲ್ಲೂ ಅನೇಕ ಸಭ್ಯ ಅಧಿಕಾರಿಗಳಿದ್ದಾರೆ. ಅದು ಪೇದೆಯೇ ಆಗಿರಬಹುದು ಅಥವಾ ಉನ್ನತ ಅಧಿಕಾರಿಯಾಗುರಬಹುದು, ತಮ್ಮ ನಡೆನುಡಿಯಿಂದ ಜನರ ಮನ ಗೆದ್ದಿದ್ದಾರೆ. ಅಂಥವರನ್ನು ನಾಡು ಗೌರವಿಸಿದೆ.
ಇಲ್ಲೊಬ್ಬ ಪೊಲೀಸ ಇನ್ಸ್ಪೆಕ್ಟರ್ ರನ್ನು ನಿಮಗೆ ತೋರಿಸುತ್ತೇವೆ. ವಿಡಿಯೋವನ್ನು ಗಮನವಿಟ್ಟು ನೋಡಿ. ಇವರ ಹೆಸರು ದಿವಾಕರ್ ಅಂತೆ. ರಾಮನಗರ ಜಿಲ್ಲೆಯ ಚನ್ನಪಟ್ಟಣದ ಒಂದು ಪೊಲೀಸ್ ಠಾಣೆಯಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಸೇವೆಯಲ್ಲಿದ್ದಾರೆ.
ಸಮಸ್ಯೆ ಏನೆಂದರೆ ದಿವಾಕರ್ ಗೆ ಸಾರ್ವಜನಿಕರೊಂದಿಗೆ ಹೇಗೆ ಮಾತಾಡಬೇಕು, ವರ್ತಿಸಬೇಕು ಅನ್ನೋದು ಗೊತ್ತಿಲ್ಲ. ಖಾಕಿ ತೊಟ್ಟಿರೋದೇ ಆವಾಜ್ ಹಾಕೋದಿಕ್ಕೆ ಅನ್ನುವಂತಿದೆ ಅವರ ವರ್ತನೆ. ಅವರ ಎದುರು ಒಬ್ಬ ಮಹಿಳೆ ಕೂತಿದ್ದಾರೆ ಮತ್ತು ದಿವಾಕರ್ ಅವರೊಂದಿಗೆ ಜೋರು ಧ್ವನಿಯಲ್ಲಿ ಮಾತಾಡುತ್ತಿದ್ದಾರೆ.
ಹಾಗೆಯೇ, ಯಾವುದೋ ಪ್ರಕರಣದ ಬಗ್ಗೆ ವಿವರ ಕೇಳಲು ಬಂದಿರುವ ಪತ್ರಕರ್ತರೊಬ್ಬರಿಗೆ ದಿವಾಕರ್ ಏಕವಚನದಲ್ಲಿ ಮಾತಾಡಿದ್ದಾರೆ. ಪತ್ರಕರ್ತರ ಹೆಸರು ಹರೀಶ್ ಆಗಿದೆ. ಪೊಲೀಸಪ್ಪನ ದುರ್ವತನೆಯನ್ನು ಹರೀಶ್ ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿಯಲು ಪ್ರಯತ್ನಿಸಿದರೆ, ದಿವಾಕರ್ ಹೆದರಿಸಿ ಮೊಬೈಲ್ ಕಿತ್ತುಕೊಳ್ಳಲು ಮುಂದಾಗುತ್ತಾರೆ.
ಇದನ್ನೂ ಓದಿ: Shilpa Shetty: ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ