Sign In

By signing in or creating an account, you agree with Associated Broadcasting Company's Terms & Conditions and Privacy Policy.

Channarayapatna: ಶಾಲೆಯಲ್ಲಿ ಬಕ್ರೀದ್ ನಮಾಜ್, ವಿಷಾದ ವ್ಯಕ್ತಪಡಿಸಿ ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಆಡಳಿತ ಮಂಡಳಿ

Channarayapatna: ಶಾಲೆಯಲ್ಲಿ ಬಕ್ರೀದ್ ನಮಾಜ್, ವಿಷಾದ ವ್ಯಕ್ತಪಡಿಸಿ ಮುಂದೆ ಹಾಗಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ ಆಡಳಿತ ಮಂಡಳಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 01, 2023 | 11:30 AM

ಶಾಲೆಯವರು ಆಗಿರುವ ಘಟನೆಗೆ ವಿಷಾದಿಸಿ ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದಲ್ಲಿರುವ ಜ್ಞಾನ ಸಾಗರ ಇಂಟರ್ ನ್ಯಾಷನಲ್ ಶಾಲೆ (Jnanasagara International School) ಭಾರೀ ವಿವಾದದಲ್ಲಿ ಸಿಲುಕಿಕೊಂಡಿದೆ. ವಿಷಯವೇನೆಂದರೆ, ಬಕ್ರೀದ್ ಹಬ್ಬದಂದು (Bakrid festival) ಶಾಲೆಯ ಎಲ್ಲ ಮಕ್ಕಳಿಗೆ ನಮಾಜ್ ಮಾಡಿಸಲಾಗಿದೆ ಮತ್ತು ಹಬ್ಬದ ತಿರುಳನ್ನು ಸಾರುವ ಒಂದು ರೂಪಕವನ್ನು ಮಕ್ಕಳಿಂದ ಮಾಡಿಸಲಾಗಿದೆ. ಅಸಲಿಗೆ ಅವತ್ತು ಜನರಲ್ ಹಾಲಿಡೇ (general holiday), ಶಾಲೆಯನ್ನು ಯಾಕೆ ಓಪನ್ ಇಡಲಾಗಿತ್ತು ಅಂತ ಗೊತ್ತಾಗಿಲ್ಲ. ಶಾಲಾ ವ್ಯವಸ್ಥಾಪಕ ಮಂಡಳಿ ಮತ್ತು ಬೋಧಕವರ್ಗ ಮಕ್ಕಳನ್ನು ನಮಾಜ್ ಮಾಡಿಸಿದ್ದಕ್ಕೆ ಪಟ್ಟಣದ ಹಿಂದೂ ಸಂಘಟನೆಗಳ 8-10 ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿ ಶಾಲೆಯ ಮುಂದೆ ಪ್ರತಿಭಟನೆ ನಡೆಸಿದ್ದಲ್ಲದೆ ಶಾಲೆಯ ಸಿಬ್ಬಂದಿಯೊಂದಿಗೆ ಮಾತಾಡಿದ್ದಾರೆ. ಶಾಲೆಯವರು ಆಗಿರುವ ಘಟನೆಗೆ ವಿಷಾದಿಸಿ ಮುಂದೆ ಹಾಗಾಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ