1 ತಿಂಗಳಲ್ಲಿ ಕೇದಾರನಾಥ ದೇವಾಲಯಕ್ಕೆ 6.5 ಲಕ್ಷ ಭಕ್ತರ ಭೇಟಿ
ಚಾರ್ ಧಾಮ್ ಯಾತ್ರೆಯು 30 ದಿನಗಳಲ್ಲಿ 1.6 ಮಿಲಿಯನ್ ಯಾತ್ರಾರ್ಥಿಗಳನ್ನು ಆಕರ್ಷಿಸಿದೆ. ಕೇದಾರನಾಥವು 6.5 ಲಕ್ಷಕ್ಕೂ ಹೆಚ್ಚು ಭಕ್ತರ ದರ್ಶನಕ್ಕೆ ಸಾಕ್ಷಿಯಾಗಿದೆ. ಭಾರತ ಮತ್ತು ವಿದೇಶಗಳಾದ್ಯಂತ ಭಕ್ತರು ಪೂಜ್ಯ ಚಾರ್ ಧಾಮ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೆಚ್ಚಿನ ಉತ್ಸಾಹ ಮತ್ತು ಭಕ್ತಿಯಿಂದ ಆಗಮಿಸಿದ್ದಾರೆ.
ಡೆಹ್ರಾಡೂನ್, ಮೇ 31: ಉತ್ತರಾಖಂಡ್ ಚಾರ್ ಧಾಮ್ ಯಾತ್ರೆಯು (Char Dham Yatra) ಪ್ರಾರಂಭವಾದಾಗಿನಿಂದ 1.6 ಮಿಲಿಯನ್ ಭಕ್ತರನ್ನು ಆಕರ್ಷಿಸಿದೆ. ಈ ವರ್ಷದ ತೀರ್ಥಯಾತ್ರೆಯ ಪ್ರಮುಖ ಅಂಶವೆಂದರೆ ಕೇದಾರನಾಥ ಧಾಮದಲ್ಲಿ ಅಸಾಧಾರಣ ಜನದಟ್ಟಣೆ. ಮೇ 2ರಂದು ಕೇದಾರನಾಥ ದೇವಾಲಯದ (Kedarnath Temple) ಬಾಗಿಲು ತೆರೆದ ಕೇವಲ 30 ದಿನಗಳಲ್ಲಿ 6.5 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ್ದಾರೆ. ಶಿವನಿಗೆ ಸಮರ್ಪಿತವಾದ ಈ ಪವಿತ್ರ ಹಿಮಾಲಯನ್ ದೇವಾಲಯ ಹಿಂದೂಗಳ ಪವಿತ್ರ ಧಾರ್ಮಿಕ ಸ್ಥಳಗಳಲ್ಲಿ ಒಂದು.
ಚಾರ್ ಧಾಮ ಯಾತ್ರೆಯು ಏಪ್ರಿಲ್ 30ರಂದು ಅಧಿಕೃತವಾಗಿ ಪ್ರಾರಂಭವಾಯಿತು. ಕೇದಾರನಾಥ ಧಾಮವು ಮೇ 2ರಂದು ತೆರೆಯಲ್ಪಟ್ಟಿತು. ನಂತರ ಬದರಿನಾಥ ಧಾಮವು ಮೇ 4ರಂದು ತೆರೆಯಲ್ಪಟ್ಟಿತು. ಈ ದೇವಾಲಯಗಳು ಪ್ರತಿ ವರ್ಷ ಕೇವಲ 6 ತಿಂಗಳು ತೆರೆದಿರುತ್ತವೆ. ಚಳಿಗಾಲದಲ್ಲಿ (ಅಕ್ಟೋಬರ್-ನವೆಂಬರ್) ಮುಚ್ಚಲ್ಪಡುತ್ತವೆ. ಬೇಸಿಗೆಯಲ್ಲಿ (ಏಪ್ರಿಲ್-ಮೇ) ಮತ್ತೆ ತೆರೆಯಲ್ಪಡುತ್ತವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ