AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಬು ಬೆಳೆಗಾರರಿಗೆ ವ್ಯವಸ್ಥಿತ ಮೋಸ; ಶಾಸಕ ಯತ್ನಾಳ್ ಆಕ್ರೋಶ

ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಸುಷ್ಮಾ ಚಕ್ರೆ|

Updated on: Nov 08, 2025 | 10:15 PM

Share

ಕಬ್ಬು ದರದ ವಿಷಯವಾಗಿ ಸರ್ಕಾರ ವ್ಯವಸ್ಥಿತವಾಗಿ ಮೋಸ ಮಾಡಿದೆ. ಕಬ್ಬು ಕಾರ್ಖಾನೆ ನಡೆಯಲು ಸರ್ಕಾರ ಬೆಂಬಲ ನೀಡಬೇಕು. ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಕಾರ್ಖಾನೆ ಉತ್ಪಾದಿಸುವ ವಿದ್ಯುತ್ ಸರ್ಕಾರ ಖರೀದಿಸುವುದಿಲ್ಲ. ಸಕ್ಕರೆ ಕಾರ್ಖಾನೆ ಉತ್ಪಾದಿಸುವ ವಿದ್ಯುತ್ ಖರೀದಿಸಿದರೆ ಕಾರ್ಖಾನೆಗಳಿಗೂ ಲಾಭವಾಗುತ್ತದೆ. ಆಡಳಿತ ಮಂಡಳಿ ಭ್ರಷ್ಟಾಚಾರ ಮಾಡುತ್ತವೆ, ಲೂಟಿ ಮಾಡುತ್ತಿವೆ. ಇನ್ನೂ ನೂರಾರು ಕೋಟಿ ರೂ. ರೈತರ ಬಾಕಿ ಕೊಟ್ಟಿಲ್ಲ. 2018ರಿಂದಲೂ ಕಾರ್ಖಾನೆಗಳೂ ರೈತರ ಬಾಕಿ ಕೊಟ್ಟಿಲ್ಲ. ಕೇವಲ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿ, ಸಿಹಿ ಹಂಚಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಗದಗ, ನವೆಂಬರ್ 8: ಕಾಂಗ್ರೆಸ್ ಪಕ್ಷದಿಂದಾಗಿ ದೇಶದ್ರೋಹಿಗಳಿಗೆ ಜೈಲಿನಲ್ಲಿ ಸವಲತ್ತು ಸಿಗುತ್ತದೆ. ಸಮಗ್ರ ತನಿಖೆಯಾಗಿ ಸಂಬಂಧಿಸಿದವರ ವಿರುದ್ಧ ಶಿಕ್ಷೆಯಾಗಲಿ. ದೇಶದ್ರೋಹಿಗಳಿಗೆ ಜೈಲು ವಿಶ್ರಾಂತಿ ಧಾಮವಾಗಿದೆ. ನಮ್ಮ ಸರ್ಕಾರ ಇದ್ದಾಗಲೂ ಮೊಬೈಲ್ ವೀಡಿಯೋ ಬಳಸುತ್ತಿದ್ದರು. ಯಾವ ಸರ್ಕಾರಗಳೂ ಪರಪ್ಪನ ಅಗ್ರಹಾರವನ್ನು ಸರಿಯಾಗಿರಿಸಿಲ್ಲ. ಸಿಸಿಟಿವಿ ಅಳವಡಿಸುವ ಮೂಲಕ ಭದ್ರತೆ ವಹಿಸಬೇಕು ಎಂದು ಗದಗದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basanagowda Patil Yatnal) ಹೇಳಿದ್ದಾರೆ.

ಕಬ್ಬು ದರದ ವಿಷಯವಾಗಿ ಸರ್ಕಾರ ವ್ಯವಸ್ಥಿತವಾಗಿ ಮೋಸ ಮಾಡಿದೆ. ಕಬ್ಬು ಕಾರ್ಖಾನೆ ನಡೆಯಲು ಸರ್ಕಾರ ಬೆಂಬಲ ನೀಡಬೇಕು. ಸಕ್ಕರೆ ಕಾರ್ಖಾನೆಗಳು ವಿದ್ಯುತ್ ಉತ್ಪಾದನೆ ಮಾಡುತ್ತದೆ. ಕಾರ್ಖಾನೆ ಉತ್ಪಾದಿಸುವ ವಿದ್ಯುತ್ ಸರ್ಕಾರ ಖರೀದಿಸುವುದಿಲ್ಲ. ಸಕ್ಕರೆ ಕಾರ್ಖಾನೆ ಉತ್ಪಾದಿಸುವ ವಿದ್ಯುತ್ ಖರೀದಿಸಿದರೆ ಕಾರ್ಖಾನೆಗಳಿಗೂ ಲಾಭವಾಗುತ್ತದೆ. ಆಡಳಿತ ಮಂಡಳಿ ಭ್ರಷ್ಟಾಚಾರ ಮಾಡುತ್ತವೆ, ಲೂಟಿ ಮಾಡುತ್ತಿವೆ. ಇನ್ನೂ ನೂರಾರು ಕೋಟಿ ರೂ. ರೈತರ ಬಾಕಿ ಕೊಟ್ಟಿಲ್ಲ. 2018ರಿಂದಲೂ ಕಾರ್ಖಾನೆಗಳೂ ರೈತರ ಬಾಕಿ ಕೊಟ್ಟಿಲ್ಲ. ಕೇವಲ ಕಣ್ಣಿಗೆ ಮಣ್ಣು ಎರಚುವ ಕೆಲಸ ಮಾಡಿ, ಸಿಹಿ ಹಂಚಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ