ನವೆಂಬರ್ 10ರಿಂದ 16ರ ವೆರೆಗಿನ ವಾರ ಭವಿಷ್ಯ: ಯಾವ ರಾಶಿಗೆ ಏನು ಫಲ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ನವೆಂಬರ್ 10 ರಿಂದ 16, 2025ರ ವಾರದ ಭವಿಷ್ಯವನ್ನು ನೀಡಿದ್ದಾರೆ. ಈ ವಾರದಲ್ಲಿ ಗ್ರಹಗಳ ಸ್ಥಾನ, ಪ್ರಮುಖ ತಿಥಿಗಳು, ಹಬ್ಬಗಳು ಮತ್ತು ವಿಶೇಷ ಆಚರಣೆಗಳನ್ನು ವಿವರಿಸಿದ್ದಾರೆ. ಮೇಷ, ವೃಷಭ, ಮಿಥುನ, ಕರ್ಕಾಟಕ ಮತ್ತು ಸಿಂಹ ರಾಶಿಗಳ ಆರ್ಥಿಕ, ವೈಯಕ್ತಿಕ, ವೃತ್ತಿ ಮತ್ತು ಆರೋಗ್ಯಕ್ಕೆ ಸಂಬಂಧಿಸಿದ ಫಲಾಫಲಗಳು ಹಾಗೂ ಪರಿಹಾರಗಳನ್ನು ಈ ವಾರಭವಿಷ್ಯದಲ್ಲಿ ತಿಳಿಸಿದ್ದಾರೆ.
ಈ ವಾರ ಕಾರ್ತಿಕ ಸೋಮವಾರ, ಕಾರ್ಕಳ ಮತ್ತು ಮಂಗಳೂರಿನಲ್ಲಿ ದೀಪೋತ್ಸವ, ಹೊಂಬುಜದಲ್ಲಿ ಪಾರ್ಶ್ವನಾಥರ ಆರಾಧನಾ ಮಹೋತ್ಸವ, ಕಾಲಾಷ್ಟಮಿ, ವೃಶ್ಚಿಕ ಸಂಕ್ರಮಣ, ಮತ್ತು ಹುಬ್ಬಳ್ಳಿಯಲ್ಲಿ ನಿಜಗುಣ ಶಿವಯೋಗಿಗಳ ಆರಾಧನಾ ಮಹೋತ್ಸವ ಮುಂತಾದ ವಿಶೇಷ ದಿನಗಳಿವೆ. ಗ್ರಹಗಳ ಸ್ಥಿತಿಯ ಪ್ರಕಾರ ಶನಿ ಗ್ರಹ ಮೀನ ರಾಶಿಯಲ್ಲಿ, ರಾಹು ಕುಂಭ ರಾಶಿಯಲ್ಲಿ, ಗುರು ಕರ್ಕಾಟಕ ರಾಶಿಯಲ್ಲಿ, ಕೇತು ಸಿಂಹ ರಾಶಿಯಲ್ಲಿ ಸಂಚಾರ ಮಾಡುತ್ತಿವೆ. ರವಿ ಮತ್ತು ಶುಕ್ರ ತುಲಾ ರಾಶಿಯಲ್ಲಿದ್ದು, ನವೆಂಬರ್ 16ರಂದು ರವಿ ಗ್ರಹ ವೃಶ್ಚಿಕ ರಾಶಿಗೆ ಪ್ರವೇಶಿಸಲಿದೆ. ಬುಧ ಮತ್ತು ಕುಜ ಗ್ರಹಗಳು ಈಗಾಗಲೇ ವೃಶ್ಚಿಕ ರಾಶಿಯಲ್ಲಿವೆ. ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ನೀಡಿರುವ ನವೆಂಬರ್ 10ರಿಂದ 16ರ ವೆರೆಗಿನ ವಾರದ ಭವಿಷ್ಯದ ಮಾಹಿತಿ ಈ ವಿಡಿಯೋದಲ್ಲಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Latest Videos
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್

