ಅನಾರೋಗ್ಯದಲ್ಲಿರುವ ಮಗನನ್ನು ನೋಡಲು ದೇವರ ಪ್ರಸಾದದೊಂದಿಗೆ ಆಸ್ಪತ್ರೆಗೆ ಆಗಮಿಸಿದ ಚೆನ್ನಮ್ಮ ದೇವೇಗೌಡ

|

Updated on: Aug 31, 2023 | 4:24 PM

ದೇವಸ್ಥಾನದಿಂದ ಪ್ರಸಾದ ತೆಗೆದುಕೊಂಡೇ ಚೆನ್ನಮ್ಮ ಅವರು ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯ ಆವರಣದಲ್ಲಿ ಅವರನ್ನು ಕಾರಿಂದ ಇಳಿಸಿ ವ್ಹೀಲ್ ಚೇರೊಂದರಲ್ಲಿ ಕೂರಿಸಿ ತಳ್ಳಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಅವರ ಹಿಂದೆಯೇ ವ್ಯಕ್ತಿಯೊಬ್ಬರು ಹಳದಿ ಬಣ್ಣದ ಚೀಲದಲ್ಲಿ ಪ್ರಸಾದ ತೆಗೆದುಕೊಂಡು ಓಡುತ್ತಿರುವುದನ್ನು ಸಹ ನೋಡಬಹುದು.

ಬೆಂಗಳೂರು: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ (HD Devegowda) ಪತ್ನಿ ಚೆನ್ನಮ್ಮ ದೇವೇಗೌಡ (Chennamma Devegowda) ಈಗ ವಯೋವೃದ್ಧೆ. ಅವರ ವಯಸ್ಸು ಈಗ 90 ರ ಆಸುಪಾಸಿನಲ್ಲಿರಬೇಕು. ನಡೆದಾಡುವುದು ಅವರಿಗೆ ಸಾಧ್ಯವಾಗುತ್ತಿಲ್ಲವಾದ್ದರಿಂದ ವ್ಹೀಲ್ ಚೇರ್ ನಲ್ಲೇ ಓಡಾಟ. ಮಗ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅನಾರೋಗ್ಯದಿಂದ ಆಸ್ಪತ್ರೆ ಸೇರಿರುವ ಸುದ್ದಿ ಕೇಳಿ ಅವರಲ್ಲಿ ತಳಮಳ ಉಂಟಾಗಿರೋದು ಸಹಜವೇ. ಮಗನನ್ನು ನೋಡಬೇಕೆಂದು ಅವರು ಇಂದು ಜಯನಗರದ ಅಪೊಲ್ಲೋ ಆಸ್ಪತ್ರೆಗೆ ಆಗಮಿಸಿದರು. ಆದರೆ, ಅದಕ್ಕೂ ಮುಂಚೆ ಚೆನ್ಮಮ್ಮ ಅವರು ದೇವಾಸ್ಥಾನವೊಂದಕ್ಕೆ ತೆರಳಿ ಮಗನಿಗಾಗಿ ಅರ್ಚನೆ ಮಾಡಿಸಿದ್ದರು. ಅಲ್ಲಿಂದ ಪ್ರಸಾದ ತೆಗೆದುಕೊಂಡೇ ಅವರು ಆಸ್ಪತ್ರೆಗೆ ಆಗಮಿಸಿದರು. ಆಸ್ಪತ್ರೆಯ ಆವರಣದಲ್ಲಿ ಅವರನ್ನು ಕಾರಿಂದ ಇಳಿಸಿ ವ್ಹೀಲ್ ಚೇರೊಂದರಲ್ಲಿ ಕೂರಿಸಿ ತಳ್ಳಿಕೊಂಡು ಹೋಗುತ್ತಿರುವುದನ್ನು ನೋಡಬಹುದು. ಅವರ ಹಿಂದೆಯೇ ವ್ಯಕ್ತಿಯೊಬ್ಬರು ಹಳದಿ ಬಣ್ಣದ ಚೀಲದಲ್ಲಿ ಪ್ರಸಾದ ತೆಗೆದುಕೊಂಡು ಓಡುತ್ತಿರುವುದನ್ನು ಸಹ ನೋಡಬಹುದು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ